ಕಾಸರಗೋಡು: ಕೇರಳ-ಕರ್ನಾಟಕ ಗಡಿ ಪ್ರದೇಶದಲ್ಲಿರುವ ಬಂದಡ್ಕ ಏಣಿಯಡಿ ಮಖಾಂ ಉರುಸ್ ಜ. 30ರಿಂದ ಫೆ.6ರವರೆಗೆ ನಡೆಯಲಿದೆ. 30ರಂದು ಬೆಳಗ್ಗೆ 10.30ಕ್ಕೆ ಅಬ್ದುಲ್ ಕರೀಂ ಬಾಖವಿ ಏಣಿಯಡಿ ಅವರು ಮಕಾಂ ಝಿಯಾರತ್‍ಗೆ ಚಾಲನೆ ನೀಡಲಿದ್ದಾರೆ. ಸ್ವಾಗತ ಸಮಿತಿ ಅಧ್ಯಕ್ಷ ಮುಹಮ್ಮದ್ ರಫೀಕ್ ಎಂ.ಎ. ಧ್ವಜಾರೋಹಣ ನಡೆಸುವರು. ಭಾರತದಗ್ರ್ಯಾಂಡ್ ಮುಫ್ತಿ ಮತ್ತು ಏಣಿಯಡಿ ಮಹಲ್ ಸುಲ್ತಾನುಲ್ ಉಲಮಾ ಕಾಂತಾಪುರಂ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಉದ್ಘಾಟಿಸುವರು ಎಂದು ಏಣಿಯಡಿ ಜುಮಾ ಮಸೀದಿ ಖತೀಬ್ ಅಬ್ದುಲ್ ಅಜೀಜ್ ನಯೀಮಿ ಸುದ್ದಿಗೋಷ್ಠೀಯಲ್ಲಿ ತಿಳಿಸಿದ್ದಾರೆ.
ಅಂದು ರಾತ್ರಿ 8.30ಕ್ಕೆ ಆರಂಭಗೊಳ್ಳುವ ಧಾರ್ಮಿಕ ಪ್ರವಚನವನ್ನು ಮಾರ್ಕಸ್ ನಿರ್ದೇಶಕ ಸಿ. ಮಹಮ್ಮದ್ ಫೈಝಿ ಉದ್ಘಾಟಿಸುವರು. ಅಬ್ದುಲ್ಲಕುಞÂ ಹಾಜಿ ಪಟ್ಟರ್‍ಮೂಲ ಅಧ್ಯಕ್ಷತೆ ವಹಿಸುವರು. ಏಣಿಯಡಿ ಖತೀಬ್ ಅಬ್ದುಲ್ ಅಜೀಜ್ ನಯೀಮಿ ಉಪನ್ಯಾಸ ನೀಡಲಿದ್ದಾರೆ. ಪ್ರತಿದಿನ ರಾತ್ರಿ 8.30ರಿಂದ ಧಾರ್ಮಿಕ ಪ್ರವಚನ ನಡೆಯುವುದು.
ಫೆ.3ರಂದು ನಡೆಯುವ ಮೌಲಿದ್ ಮಜ್ಲಿಸ್‍ನ ಅಧ್ಯಕ್ಷತೆಯನ್ನು ಸೈಯದ್ ಮುಹಮ್ಮದ್ ಸಲೀಂ ಸಖಾಫಿ ಅಲ್ ಬುಖಾರಿ ವಹಿಸಿದ್ದರು. ಸಂಜೆ 4ಕ್ಕೆ ಅನ್ವರ್ ಮನ್ನಾನಿ ತೊಡುಪುಳ ¸ ಉಪನ್ಯಾಸ ನೀಡುವರು. ಫೆ.5ರಂದು ನಡೆಯುವ ಸಮಾರೋಪ ಸಮಾರಂಭವನ್ನು ಸೈಯದ್ ಮುಹಮ್ಮದ್ ಹುಸೈನ್ ಅಲ್ ಅಸ್‍ಹರಿ ಪಟ್ಟಾಂಬಿ ಉದ್ಘಾಟಿಸುವರು. ಅಬ್ದುಲ್ ವಹಾಬ್ ನಯೀಮಿ ಕೊಲ್ಲಂ ಮುಖ್ಯ ಭಾಷಣ ಮಾಡುವರು. ಫೆ.6ರಂದು ಪೆರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಅವರ ನೇತೃತ್ವದಲ್ಲಿ ಆಧ್ಯಾತ್ಮಿಕ ಕೂಟ ನಡೆಯಲಿದ್ದು, ಸಾವಿರಾರು ಮಂದಿಗೆ ತುಪ್ಪದಅನ್ನ ಸಂತರ್ಪಣೆಯೊಂದಿಗೆ ಉರುಸ್ ಸಮಾರೋಪಗೊಳ್ಳಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಮಾಅತ್ ಅಧ್ಯಕ್ಷ ಅಬ್ದುಲ್ಲಕುಞÂ ಹಾಜಿ ಪಟ್ಟಾರ್‍ಮೂಲ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಕೆ.ಟಿ, ಉರುಸ್ ಸಮಿತಿ ಅಧ್ಯಕ್ಷ ರಫೀಕ್ ಎಂ.ಎ, ಪ್ರಧಾನ ಸಂಚಾಲಕ ಮುಹಮ್ಮದ್ ಹನೀಫ್ ಬಿ.ಎಂ., ಕೋಶಾಧಿಕಾರಿ ಉಸ್ಮಾನ್ ವಳಪಿಲ್ ಮತ್ತು ಬಶೀರ್ ಏಣಿಯಡಿ ಉಪಸ್ಥಿತರಿದ್ದರು.

