HEALTH TIPS

ಸಲೂನ್ ಮೆಟ್ಟಿಲು ತುಳಿದ ಕುಂಭಮೇಳದ ಮೊನಾಲಿಸಾ: ಬದಲಾದ ಲುಕ್!

ಲಕ್ನೋ:ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ವ್ಯಾಪಕ ಸುದ್ದಿಯಾಗಿರುವ ರುದ್ರಾಕ್ಷಿ ಮಾರುವ ಹುಡುಗಿ ಮೊನಾಲಿಸಾಳ 'ಲುಕ್' ಇದೀಗ ಬದಲಾಗಿದೆ.

ಹೌದು, ಮೊನಾಲಿಸಾ ಈಗ ಸಲೂನ್ ಮೆಟ್ಟಿಲೇರಿದ್ದಾಳೆ. ಸಲೂನ್ ಒಂದರ ಮ್ಯಾನೇಜರ್ ಯುವತಿ ಮೊನಾಲಿಸಾಳ ಸಹಜ ಸೌಂದರ್ಯಕ್ಕೆ ಹೊಸ ಲುಕ್ ಕೊಟ್ಟಿದ್ದಾರೆ.

ಅವರ ಹೇರ್‌ಸ್ಟೈಲ್‌ ಅನ್ನೂ ಬದಲಾಯಿಸಿದ್ದಾರೆ.

ಇದರಿಂದ ಮತ್ತೊಂದು ಮನಮೋಹಕ ರೂಪದಲ್ಲಿ ಮೊನಾಲಿಸಾ ಕಾಣುತ್ತಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಈ ಕುರಿತು ವಿಡಿಯೊ ಗಮನ ಸೆಳೆದಿದೆ.


ಕಂದು ಮೈಬಣ್ಣ, ಆಕರ್ಷಕ ಕಣ್ಣುಗಳು, ಮುಗ್ಧ ನಗುವಿನ ಮೂಲಕ ಎಲ್ಲರನ್ನು ಸೆಳೆಯುತ್ತಿರುವ ಈಕೆಯ ಹೆಸರು ಮೊನಾಲಿಸಾ. ಮಧ್ಯಪ್ರದೇಶದ ಇಂದೋರ್‌ನಿಂದ ಬಂದಿರುವ ಈಕೆ ಮಹಾ ಕುಂಭಮೇಳದಲ್ಲಿ ಜಪಮಾಲೆಗಳನ್ನು ಮಾರುತ್ತಾಳೆ.

ಮತ್ತೊಂದು ವಿಡಿಯೊದಲ್ಲಿ ಇನ್‌ಫ್ಲೂಯೆನ್ಸರ್‌ ಮೊನಾಲಿಸಾ ಬಳಿ ಮದುವೆಯಾಗಿದೆಯಾ? ಎಂದು ಕೇಳಿದ್ದು. ಅದಕ್ಕೆ ಆಕೆ, 'ನನಗಿನ್ನು 16 ವರ್ಷ...ಇಷ್ಟು ಚಿಕ್ಕ ವಯಸ್ಸಿನಲ್ಲಿ ಯಾಕೆ ಮದುವೆಯಾಗಬೇಕು' ಎಂದು ಹೇಳಿದ್ದಾಳೆ. ಅಲ್ಲದೇ ಪೋಷಕರು ತೋರಿಸುವ ಹುಡುಗನನ್ನೇ ವರಿಸುವುದಾಗಿಯೂ ಹೇಳಿದ್ದಾಳೆ.

ಏತನ್ಮಧ್ಯೆ, ಮೊನಾಲಿಸಾಳ ದಿಡೀರ್‌ ಜನಪ್ರಿಯತೆ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಕೆಲವರು, ಆಕೆಯ ಸುತ್ತ ಪುರುಷರು ನಿಂತುಕೊಂಡು ಸೆಲ್ಫಿ ಕ್ಲಿಕ್ಕಿಸುತ್ತಿರುವುದು, ಅವಳ ಬೆನ್ನಟ್ಟಿ ಹೋಗುತ್ತಿರುವುದರ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಆಕೆಯ ಖಾಸಗಿತನವನ್ನು ಗೌರವಿಸಿ ಎಂದು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries