ಉಪ್ಪಳ: ಕಯ್ಯಾರ್ ಕ್ರಿಸ್ತ ರಾಜ ಚರ್ಚ್‍ನ ನೂತನ ಕಟ್ಟಡಕ್ಕೆ ಶನಿವಾರ ಬೆಳಿಗ್ಗೆ ಕಾಸರಗೋಡು ವಲಯ ವಿಗಾರ್ ವಾರ್ ಫಾ.ಸ್ಟ್ಯಾನಿ ಪಿರೇರಾ ಶಿಲಾನ್ಯಾಸ ನೆರವೇರಿಸಿದರು.
ವಾಸ್ತು ಶಿಲ್ಪಿ ಅನಿಲ್ ಲೋಬೊ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಕಯ್ಯಾರ್ ಚರ್ಚ್ ಧರ್ಮಗುರು ಫಾ.ವಿಶಾಲ್ ಮೋನಿಸ್, ಪಾಲನಾ ಸಮಿತಿ ಉಪಾಧ್ಯಕ್ಷ ರೋಶನ್ ಡಿಸೋಜ, ಕಾರ್ಯದರ್ಶಿ ಝೀನಾ ಡಿ ಸೋಜ, ಸಿಸ್ಟರ್ ಜಾಸ್ಮಿನ್ ಲೂವಿಸ್, ಸಿಸ್ಟರ್ ರೀನಾ ಸೆರಾವೊ , ಅಲ್ಫೋನ್ಸ್ ಡಿಸೋಜ ಹಾಗೂ ಚರ್ಚ್ ಪಾಲನಾ ಸಮಿತಿ ಸದಸ್ಯರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಬೆಳಿಗ್ಗೆ ಕಾಸರಗೋಡು ವಲಯ ವಿಗಾರ್ ವಾರ್ ಫಾ.ಸ್ಟ್ಯಾನಿ ಪಿರೇರಾ ಬಲಿಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು.ವಿನ್ಸೆಂಟ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.




.jpg)
