ಮುಳ್ಳೇರಿಯ: ಅದೂರು ಶ್ರೀ ಭಗವತೀ ಕ್ಷೇತ್ರದಲ್ಲಿ 351 ವರ್ಷಗಳ ನಂತರ ನಡೆಯುವ ಪೆರುಂಕಳಿಯಾಟ ಮಹೋತ್ಸವಕ್ಕೆ ಕಾನಕ್ಕೋಡು ಕಾಪ್ಯ ಮಣಿಯಾಣಿ ತರವಾಡು ಸಮಿತಿ ವತಿಯಿಂದ ಶನಿವಾರ ಹಸಿರುವಾಣಿ ಸಮರ್ಪಣೆ ನಡೆಯಿತು.
ಮುಳ್ಳೇರಿಯ ಗಣೇಶ ಮಂದಿರದಿಂದ ವಾಹನ ಮೆರವಣಿಗೆಯ ಮೂಲಕ ಹೊರಟು ಚೆಂಡೆ ವಾದ್ಯದೊಂದಿಗೆ ಅದ್ದೂರಿಯಾಗಿ ಅದೂರು ಭಗವತೀ ಕ್ಷೇತ್ರಕ್ಕೆ ಕೊಂಡೊಯ್ಯಲಾಯಿತು. ಈ ಸಂದರ್ಭದಲ್ಲಿ ಕ್ಷೇತ್ರದ ವತಿಯಿಂದ ಬರಮಾಡಿಕೊಳ್ಳಲಾಯಿತು.
ಮುಳ್ಳೇರಿಯಾ ಗಣೇಶ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಂಟಾರು ಬ್ರಹ್ಮಶ್ರೀ ರವೀಶ ತಂತ್ರಿ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಾನಕ್ಕೋಡು ಕಾಪ್ಯ ತರವಾಡು ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶ್ರೀ ಭಗವತೀ ಕ್ಷೇತ್ರದಲ್ಲಿ ಹಸಿರುವಾಣಿ ಸರ್ಮಪಣೆ ಬಳಿಕ ಪ್ರಸಾದ ವಿತರಣೆಯೂ, ಉಪಹಾರ ವ್ಯವಸ್ಥೆಯು ನಡೆಯಿತು. ಕಾನಕ್ಕೋಡು ತರವಾಡು ಶಾಖೆಯ ಸದಸ್ಯರು, ಸಮಿತಿ ಸದಸ್ಯರು ಉಪಸ್ಥಿತರಿದ್ದರು.






