ಕೊಚ್ಚಿ: ಕೊಚ್ಚಿನ್ ಶಿಪ್‍ಯಾರ್ಡ್ ಲಿಮಿಟೆಡ್ ನೌಕಾಪಡೆಗಾಗಿ ನಿರ್ಮಿಸುತ್ತಿರುವ ಜಲಾಂತರ್ಗಾಮಿ ವಿರೋಧಿ ಯುದ್ಧನೌಕೆ ಸರಣಿಯ ಏಳನೇ ಯುದ್ಧನೌಕೆ, ಬಿ 529 ಐಎನ್‍ಎಸ್ ಮಚಲಿಪಟ್ನಂನ ಕೀಲ್ ಹಾಕುವ ಸಮಾರಂಭವು ಹಡಗುಕಟ್ಟೆಯಲ್ಲಿ ನಡೆಯಿತು.
ಇದು ಕೊಚ್ಚಿನ್ ಶಿಪ್‍ಯಾರ್ಡ್ ನೌಕಾಪಡೆಗಾಗಿ ನಿರ್ಮಿಸುತ್ತಿರುವ ಏಳನೇ ಜಲಾಂತರ್ಗಾಮಿ ವಿರೋಧಿ ಯುದ್ಧ ಹಡಗು. ದಕ್ಷಿಣ ನೌಕಾ ಕಮಾಂಡ್‍ನ ಮುಖ್ಯಸ್ಥರಾದ ವಿಎಸ್‍ಎಂ ರಿಯರ್ ಅಡ್ಮಿರಲ್ ಉಪಲ್ ಕುಂಡು ಅವರು ಹಡಗುಕಟ್ಟೆಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಮಧು ಎಸ್. ನಾಯರ್ ಅವರ ಸಮ್ಮುಖದಲ್ಲಿ ಕೀಲು ಹಾಕುವ ಕಾರ್ಯಕ್ರಮ ನೆರವೇರಿಸಿದರು.
ಕೊಚ್ಚಿನ್ ಶಿಪ್‍ಯಾರ್ಡ್‍ನ ತಾಂತ್ರಿಕ ನಿರ್ದೇಶಕರು, ಕಾರ್ಯಾಚರಣೆ ನಿರ್ದೇಶಕರು, ನೌಕಾಪಡೆಯ ಅಧಿಕಾರಿಗಳು ಮುಂತಾದವರು ಭಾಗವಹಿಸಿದ್ದರು. ಎಂಟು ಎಎಸ್ ಡಬ್ಲ್ಯು, ಮತ್ತು ಎಸ್.ಡಬ್ಲ್ಯು.ಸಿ. ಹಡಗುಗಳ ನಿರ್ಮಾಣದ ಒಪ್ಪಂದಕ್ಕೆ ರಕ್ಷಣಾ ಸಚಿವಾಲಯ ಮತ್ತು ಕೊಚ್ಚಿನ್ ಶಿಪ್‍ಯಾರ್ಡ್ ನಡುವೆ ಏಪ್ರಿಲ್ 30, 2019 ರಂದು ಸಹಿ ಹಾಕಲಾಗಿತ್ತು. 'ಆತ್ಮನಿರ್ಭರ ಭಾರತ' ಯೋಜನೆಯಡಿಯಲ್ಲಿ, ಅಂತಹ ಹಡಗುಗಳನ್ನು ಉತ್ತಮ ಗುಣಮಟ್ಟದ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳನ್ನು ಬಳಸಿ ನಿರ್ಮಿಸಲಾಗುವುದು.





