ಉಪ್ಪಳ: ಸಮಾಜದ ಅಂಕು ಡೊಂಕುಗಳನ್ನು ತಿದ್ದುತ್ತ ನಾಟಕ ಬದುಕು ಕಲಿಸುತ್ತದೆ. ಸಕ್ರಿಯ ಕಲಾರಾಧನೆಯಿಂದ ಜನಮಾನಸದಲ್ಲಿ ಉಳಿಯುವ ಕಲಾವಿದರು ನಿರಂತರ ಕಲಾ ಸೇವೆ ಮಾಡುವ ಮೂಲಕ ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತದೆ. ಕಳೆದ ಇಪ್ಪತ್ತೈದು ವರ್ಷಗಳಿಂದ ನಾಟಕ ಕಲೆಯ ಮೂಲಕ ಸಮಾಜದಲ್ಲಿ ಬೇರೂರಿರುವ ಶಾರದಾ ಆಟ್ರ್ಸ್ ಕಲಾವಿದರು ಇನ್ನಷ್ಟು ಸಾಧನೆಯ ಮೂಲಕ ಕಲೆಯನ್ನು ಬೆಳಗಲಿ ಎಂದು ಕಣಿಯೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಹೇಳಿದರು.
ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವಗಳ ಕ್ಷೇತ್ರದ ವಠಾರದಲ್ಲಿ ಶಾರದಾ ಆಟ್ರ್ಸ್ ಕಲಾವಿದರು ಮಂಜೇಶ್ವರ ಇದರ ಬೆಳ್ಳಿ ಹಬ್ಬ ಸಂಭ್ರಮದ ಅಂಗವಾಗಿ ಆಯೋಜಿಸಿದ ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನಾ ಸಭೆಯಲ್ಲಿ ಸ್ವಾಮೀಜಿ ಆಶೀರ್ವಚನ ನೀಡಿದರು.
ಸಮಾಜ ಸೇವಕ, ಖ್ಯಾತ ಜ್ಯೋತಿಷಿ ಅನಿಲ್ ಪಂಡಿತ್ ಬ್ರಹ್ಮರಕೂಟ್ಲು ಉದ್ಘಾಟಿಸಿದರು. ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಧರ್ಮದರ್ಶಿ ದೇಜಪ್ಪ ಬಾಚಕೆರೆ ದಿವ್ಯ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಮುಳಿಂಜ ಶ್ರೀ ಮಹಾಲಿಂಗೇಶ್ವರ ದೇವಸ್ಧಾನದ ಆಡಳಿಂiÀತ ಮೊಕ್ತೇಸರ ಹರಿನಾಥ ಭಂಡಾರಿ ಮುಳಿಂಜ, ಮಂಗಳೂರು ಶ್ರೀ ಶಕ್ತಿ ಎಜುಕೇಶನ್ ಟ್ರಸ್ಟ್ ಪ್ರಧಾನ ಸಲಹೆಗಾರ ರಮೇಶ್ ಕೆ, ಹೊಸಂಗಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ನ್ಯಾಯವಾದಿ ನವೀನ್‍ರಾಜ್, ಪದ್ಮನಾಭ ಪೂಜಾರಿ ತಲಪಾಡಿ, ನರೇಂದ್ರ, ಐಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸೇವಾ ಸಮಿತಿ ಅಧ್ಯಕ ಲಕ್ಷ್ಮಣ ಕೆ.ಕುಂಬಳೆ, ಸಂಪತ್ ಮೊದಲಾದವರು ಉಪಸ್ಥಿತರಿದ್ದರು.




.jpg)
