HEALTH TIPS

ಕುಂಜತ್ತೂರು ಹೈಯರ್ ಸೆಕಂಡರಿ ಶಾಲೆಯಲ್ಲಿ ವಿಜೃಂಭಿಸಿದ 1994 - 95 ನೇ ಶೈಕ್ಷಣಿಕ ವರ್ಷದ ಪೂರ್ವ ವಿದ್ಯಾರ್ಥಿಗಳ ಸ್ನೇಹ ಸಂಗಮ

ಮಂಜೇಶ್ವರ: ಕುಂಜತ್ತೂರು ಹೈಯರ್ ಸೆಕಂಡರಿ ಶಾಲೆಯಲ್ಲಿ ಬಾನುವಾರ ಬೆಳಿಗ್ಗೆ 1994 - 95 ನೇ ಶೈಕ್ಷಣಿಕ ವರ್ಷದ  ಪೂರ್ವ ವಿದ್ಯಾರ್ಥಿಗಳು 30 ವರ್ಷಗಳ ಬಳಿಕ ಕಲಿತ ಶಾಲೆಯಲ್ಲಿ ಕಳೆದು ಹೋದ ನೆನಪುಗಳನ್ನು ಮೆಲುಕು ಹಾಕಲು ಮತ್ತೆ ಸೇರಿ ಅದ್ದೂರಿಯ ಪೂರ್ವ ವಿದ್ಯಾರ್ಥಿ ಸಂಗಮಕ್ಕೆ ಸಾಕ್ಷಿಯಾದರು. ಈ ಸ್ನೇಹ ಸಂಗಮ ಶಾಲೆಯ ಆವರಣದಲ್ಲಿ ಆಕರ್ಷಕವಾಗಿ ನಡೆಯಿತು.

ಸ್ನೇಹ ಸಂಗಮ ವಂದೇ ಮಾತರಂ ಗೀತೆಯೊಂದಿಗೆ ಆರಂಭಿಸಲಾಗಿತ್ತು, ಜೊತೆಗೆ ಶಾಲೆಯಲ್ಲಿ 30 ವರ್ಷಕ್ಕೆ ಮೊದಲು ನಡೆಸಿದ ಶಾಲಾ ಅಸಂಬ್ಲಿ, ಪ್ರತಿಜ್ಞೆ  ನಡೆಸಿ ತರಗತಿ ನಾಯಕ ಮುಖ್ಯೋಪಾದ್ಯಾಯರಿಂದ ವಂದನೆ ಸ್ವೀಕರಿಸಿದ ಬಳಿಕ ವಾದ್ಯ ಮೇಳಗಳೊಂದಿಗೆ ಅಂದಿನ ಅಧ್ಯಾಪಕರುಗಳು ಹಾಗೂ ವಿದ್ಯಾರ್ಥಿಗಳು ವೇದಿಕೆಗೆ ಆಗಮಿಸಿದರು.

ಬಳಿಕ ಅಗಲಿದ ವಿದ್ಯಾರ್ಥಿಗಳಿಗೆ ಹಾಗೂ ಅಧ್ಯಾಪಕರುಗಳಿಗೆ ಒಂದು ನಿಮಿಷದ ಮೌನ ಪ್ರಾರ್ಥಣೆ ಸಲ್ಲಿಸಲಾಯಿತು.

ಬಳಿಕ ಈಗಿನ ಶಾಲಾ ಮುಖ್ಯೋಪಾಧ್ಯಾಯ ಬಾಲಕೃಷ್ಣ. ಜಿ ಯವರು ಪಾರಿವಾಳವನ್ನು ಸ್ವತಂತ್ರಗೊಳಿಸುವ ಮೂಲಕ ಹಳೆ ವಿದ್ಯಾರ್ಥಿ ಸಂಗಮವನ್ನು ಉದ್ಘಾಟಿಸಿದರು. 

 ಸ್ನೇಹ ಸಂಗಮದಲ್ಲಿ ವಿದ್ಯಾರ್ಥಿಗಳ ಜೊತೆಗೆ ಶಾಲೆಯ ಮಾಜಿ ಶಿಕ್ಷಕರನ್ನು ಕೂಡಾ ಆಹ್ವಾನಿಸಲಾಗಿತ್ತು. ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ ಅನುಭವಗಳನ್ನು ಹಂಚಿಕೊಳ್ಳುವುದರ ಜೊತೆಗೆ ಅಂದು ಒಂದೊಂದು ಅಧ್ಯಾಪಕರುಗಳಿಗೂ ವಿದ್ಯಾರ್ಥಿಗಳು ಉಪನಾಮಗಳನ್ನು ಇಟ್ಟದ್ದನ್ನು ವ್ಯಂಗ್ಯವಾಗಿ ವರ್ಣಿಸಿದ್ದು ಸೇರಿದವರನ್ನು ನಗೆಯಲ್ಲಿ ತೇಲಾಡಿಸಿತು.

ಹಳೆಯ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸಾಧಿಸಿದ ಸಾಧನೆಗಳನ್ನು ಕೂಡಾ ವಿವರಿಸಿ ಸ್ನೇಹ ಸಂಗಮ ನೆನಪುಗಳ ಪುನರ್ಜನ್ಮವಲ್ಲದೆ, ಪ್ರಸ್ತುತ ಪೀಳಿಗೆ ವಿದ್ಯಾರ್ಥಿಗಳಿಗೆ ಪ್ರೇರಣೆಯ ಶಕ್ತಿ ನೀಡಿದಂತಾಯಿತು. 

ಈ ಸಂದರ್ಭ ವೇದಿಕೆಯಲ್ಲಿ ಆಯಿμÁ ಬಿಂತ್ ರಹ್ಮಾನ್ ಸ್ನೇಹ ಸಮ್ಮಿಲನಕ್ಕಾಗಿ ರಚಿಸಿದ  ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ಅಬ್ದುಲ್ ಜಬ್ಬಾರ್ ಅಧ್ಯಕ್ಷತೆ ವಹಿಸಿದರು. ಬಳಿಕ ವೇದಿಕೆಯಲ್ಲಿ ನಡೆದ ಗುರು ವಂದನೆ ಕಾರ್ಯಕ್ರಮದಲ್ಲಿ  ಆಗಮಿಸಿದ ಎಲ್ಲಾ ಅಧ್ಯಾಪಕರುಗಳಿಗೆ ಶಾಲು ಹಾಕಿ ಸ್ಮರಣಿಕೆ ಫಲಪುಷ್ಪ ನೀಡಿ ಗೌರವಿಸಲಾಯಿತು. 


ಮಧ್ಯಾಹ್ನದ ಭೋಜನದ ನಂತರ, ಸಹಪಾಠಿಗಳ ಹಳೆ ನೆನಪುಗಳನ್ನು ಮರುಕಳಿಸಲು ಕೆಲವು ಹೊಲಾಂಗಣ ಆಟಗಳನ್ನೂ ಆಯೋಜಿಸಲಾಯಿತು. ಶಾಲಾ ದಿನಗಳಲ್ಲಿ ನಡೆದ ಘಟನೆಗಳ ಕುರಿತಾದ ಚರ್ಚೆಗಳು, ಫೆÇೀಟೋ ಪ್ರದರ್ಶನ, ಮತ್ತು ವೀಡಿಯೋ ಕ್ಲಿಪ್ಪುಗಳು ಸಂಗಮವನ್ನು ಇನ್ನಷ್ಟು ಸಂತೋಷಕರವಾಗಿಸಿತ್ತು. ಈ ಸಂದರ್ಭ ಉಪ್ಪಿನಲ್ಲಿ ಹಾಕಿದ ಮಾವಿನ ಕಾಯಿ, ಅನಾನಸ್, ಬೆಂಡಿ ಮಿಠಾಯಿ, ಅಕ್ರೋಟ್ ಮೊದಲಾದವು ಕಂಡು ಬಂತು.

ಹಳೆಯ ಸ್ನೇಹಿತರೊಂದಿಗೆ ಸಮಯ ಕಳೆದ ನಂತರ, ಸಂಗಮವು ಸಹಭೋಜನದೊಂದಿಗೆ ಕೊನೆಗೊಂಡಿತು. ಹಳೆ ವಿದ್ಯಾರ್ಥಿಗಳು ಈ ಸಂಗಮವನ್ನು ಒಳ್ಳೆಯ ನೆನಪಾಗಿ ಇಟ್ಟುಕೊಂಡರು. ವಿದ್ಯಾರ್ಥಿಗಳು ಈ ಸಂಭ್ರಮದಲ್ಲಿ ತಮ್ಮ ಶಿಕ್ಷಣದ ಆಳವಾಣಿಗಳನ್ನು ಹಂಚಿಕೊಂಡು, ಅದೆμÉ್ಟೂೀ ವೃತ್ತಿಜೀವನದ ಮತ್ತು ಸಾಮಾಜಿಕ ಅನುಭವಗಳನ್ನು ಆವರಿಸಿದ ಚರ್ಚೆಗಳನ್ನು ನಡೆಸಿದರು.

ಅಂದಿನ ಶಿಕ್ಷಕರಾದ ಈಶ್ವರ ಮಾಸ್ಟರ್, ಆನಂದ ಮಾಸ್ಟರ್, ದೈಹಿಕ ಶಿಕ್ಷಕಿ ಶೋಪಿಯಾ, ಶಾಲಾ ಪಿಯೋನ್ ವಿಶ್ವನಾಥ್, ಹಾಗೂ ಶಿಕ್ಷಕಿಯರಾದ ಗಾಯತ್ರಿ, ಸುನಿತಾ, ಸಪ್ತೇಶ್ವರಿ, ಶ್ರೀಮತಿ,  ಸರಸ್ವತಿ, ನಲಿನಿ, ಪ್ರಸನ್ನ, ಶ್ಯಾಮಲಾ, ಶಶಿಕಲಾ, ಗುಲಾಬಿ, ಲೀಲಾ, ರಮಣಿ, ಮರ್ಸಿ, ಮತ್ತು ಈಗಿನ ದೈಹಿಕ ಶಿಕ್ಷಕಿಯಾದ ಅನಿತಾ ಟೀಚರ್ ಮೊದಲಾದವರು ಪಾಲ್ಗೊಂಡಿದ್ದರು.ಯತೀಶ, ದಿನೇಶ್, ಪ್ರಶಾಂತ್, ಗಪುರ್, ನವಾಜ್ ತಂಘಲ್, ನವಾಜ್ ಹಾಗೂ ಪುತ್ತು ಬಾಚಳಿಕೆ ನೇತೃತ್ವ ನೀಡಿದರು. ಅಶ್ರಫ್ ಕುಂಜತ್ತೂರು ಸ್ವಾಗತಿಸಿ ನವಾಜ್ ವಂದಿಸಿ ಅಂಕಿತಾ ಕಾರ್ಯ ಕ್ರಮ ನಿರೂಪಿಸಿದರು. ಕಾರ್ಯಕ್ರಮವು ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಂಡಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries