HEALTH TIPS

ದಾರಿ ತಪ್ಪುತ್ತಿರುವ ಸಮಾಜವನ್ನು ತಿದ್ದುವ ಕೆಲಸ ನಾಟಕಗಳು ಮಾಡಬೇಕು : ಎಡನೀರು ಶ್ರೀ- ಶಾರದಾ ಆಟ್ರ್ಸ್ ಕಲಾವಿದರು ಬೆಳ್ಳಿ ಹಬ್ಬ ಸಂಭ್ರಮ ಉದ್ಘಾಟನೆ

ಮಂಜೇಶ್ವರ: ನಾಟಕಗಳು ಸಮಾಜಕ್ಕೆ ಹಿಡಿದ ಕೈಗನ್ನಡಿ. ಸಮಾಜದಲ್ಲಿ ಬಿಂಬಿತ ಅದರ ಪ್ರತಿಬಿಂಬ ನಾಟಕದಲ್ಲಿ ನೋಡಲು ಸಾಧ್ಯವಾಗುತ್ತದೆ. ಸಮಾಜದ ಅಂಕು ಡೊಂಕುಗಳನ್ನು ತಿದ್ದುವಲ್ಲಿ ನಾಟಕಗಳು ಪ್ರಮುಖ ಪಾತ್ರವಹಿಸುತ್ತದೆ. ಸಂಸ್ಕಾರದ ಹಾಗು ಅರಿವಿನ ಕೊರತೆಯಿಂದ ಸಮಾಜ ದಾರಿ ತಪ್ಪುತ್ತಿರುವಾಗ ತಿದ್ದುವ ಕೆಲಸವನ್ನು ನಾಟಕಗಳು ಮಾಡಬೇಕು. ಕಲೆಯನ್ನು ಆದರದಿಂದ ಕಂಡು ಕಳೆದ 25 ವರ್ಷಗಳ ಸುದೀರ್ಘ ರಂಗಭೂಮಿ ಕ್ಷೇತ್ರದಲ್ಲಿ ಹೆಸರನ್ನು ಮೂಡಿಸಿ ಹೆಮ್ಮೆ ತರುವ ಕೆಲಸ ಮಾಡಿದೆ. ಇನ್ನಷ್ಟು ರಂಗಭೂಮಿ ಕಲಾವಿದರು ಹೊರಬರಲಿ. ಕಲಾವಿದರನ್ನು ಗುರುತಿಸಿ ಗೌರವಿಸುತ್ತಿರುವುದು ಕಲಾವಿದರಿಗೆ ನೀಡುವ ಗೌರವವಾಗಿದೆ ಎಂದು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು ಹೇಳಿದರು. 

ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವಗಳ ಕ್ಷೇತ್ರದ ವಠಾರದಲ್ಲಿ ಶುಕ್ರವಾರ ಶಾರದಾ ಆಟ್ರ್ಸ್ ಕಲಾವಿದರು ಮಂಜೇಶ್ವರ ಇದರ ಬೆಳ್ಳಿ ಹಬ್ಬ ಸಂಭ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು.  

ಕಣಿಯೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಉದ್ಯಾವರ ಮಾಡ ಶ್ರೀ ದೈವ ಕ್ಷೇತ್ರದ ಆಡಳಿತ ಮೊಕ್ತೇಸರ ಕಿರಣ್ ಶೆಟ್ಟಿ ಮಾಡ ಅಧ್ಯಕ್ಷತೆ ವಹಿಸಿದ್ದರು. ತಮ್ಮ ದೈವದ ಅರ್ಚಕ ಬೀರು ಚೌಟ, ಅಣ್ಣ ದೈವದ ಪಾತ್ರಿ ರಾಜ ಬೆಳ್ಚಪ್ಪಾಡ, ತಮ್ಮ ದೈವದ ತಿಮಿರಿ ಬೆಳ್ಚಪ್ಪಾಡ, ಮುಂಡಲ್ತಾಯ ದೈವದ ಪಾತ್ರಿ ಮಂಜು ಬೆಳ್ಚಪ್ಪಾಡ, ಕನಿಲ ಶ್ರೀ ಭÀಗವತಿ ಕ್ಷೇತ್ರದ ಉದಯ ಅತಾರ್ ದಿವ್ಯ ಉಪಸ್ಥಿತರಿದ್ದರು. ಕಡಂಬಾರು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಎಸ್.ಎನ್.ಕಡಂಬಾರು, ವಿಶ್ವ ಹಿಂದೂ ಪರಿಷತ್ ಮಂಜೇಶ್ವರ ಪ್ರಖಂಡ ಅಧ್ಯಕ್ಷ ಕೃಷ್ಣ ಶಿವಕೃಪಾ ಕುಂಜತ್ತೂರು, ಉದ್ಯಮಿ ಜಯರಾಮ ಶೆಟ್ಟಿ ಕಜೆಕೋಡಿ, ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರ ಅಧ್ಯಕ್ಷ ಶೇಖರ್ ಕನೀರ್ ತೋಟ, ಮಹಿಳಾ ಘಟಕ ತುಳುನಾಡು ರಕ್ಷಣಾ ವೇದಿಕೆ ಅಧ್ಯಕ್ಷೆ ಆಶಾ ಶೆಟ್ಟಿ ಅತ್ತಾವರ, ರಂಗಭೂಮಿ ವಿನ್ಯಾಸಗಾರ ತಮ್ಮ ಲಕ್ಷ್ಮಣ್, ಉದ್ಯಮಿ ಬಾಲಕೃಷ್ಣ ಬಿ. ಪದವು, ಉದ್ಯಾವರ ಮಾಡ ಶ್ರೀ ದೈವಗಳ ಕ್ಷೇತ್ರ ಮಾಜಿ ಆಡಳಿತ ಮೊಕ್ತೇಸರ ದಯಾಕರ ಮಾಡ, ಉದ್ಯಮಿ ಲಕ್ಷ್ಮಣ ಪ್ರಭು, ಉದ್ಯಮಿ ಸುರೇಂದ್ರ ಕರ್ಕೇರ, ಉದ್ಯಮಿ ತಿಲಕ್ ಪ್ರಸಾದ್ ಅಡಕಳಕಟ್ಟೆ, ಹೊಸಂಗಡಿ ಶ್ರೀ ಗಣೇಶೋತ್ಸವ ಸಮಿತಿ ಕೋಶಾಧಿಕಾರಿ ನರೇಂದ್ರ ಹೆಗ್ಡೆ ಹೊಸಂಗಡಿ, ಮಂಜೇಶ್ವರ ಗ್ರಾಮ ಪಂಚಾಯತಿ ಸದಸ್ಯ ಯಾದವ ಬಡಾಜೆ, ಮುಡಿಮಾರು ಶ್ರೀ ಮಲರಾಯ ಬಂಟ ದೈವಸ್ಥಾನ ಅಧ್ಯಕ್ಷ ರವಿ ಮುಡಿಮಾರ್, ಅರಿಯಾಳ ಶ್ರೀ ಮಲರಾಯ ಬಂಟ ದೈವಸ್ಥಾನ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ ಪೂಜಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.  

ಇದೇ ಸಂದರ್ಭದಲ್ಲಿ ಸಾಧಕರಿಗೆ ಶಾರದಾ ಕಲಾಪೋಷಕ ಪ್ರಶಸ್ತಿ ಪುರಸ್ಕಾರ, ಸಮ್ಮಾನ, ಗೌರವಾರ್ಪಣೆ ನಡೆಯಿತು. ನ್ಯಾಯವಾದಿ ಗಂಗಾಧರ ಕೊಂಡೆವೂರು ಸ್ವಾಗತಿಸಿದರು. ಸಭಾ ಕಾರ್ಯಕ್ರಮದ ಮುನ್ನಾ ಬೆಳಗ್ಗೆ ಗಣಹೋಮ, ಶಾರದಾ ಪೂಜೆ, ಮಹಾಪೂಜೆ, ಮಂಗಳಾರತಿ ನಡೆಯಿತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries