ಪೆರ್ಲ: ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕ, ಉದ್ಯಮ ಶೀಲ ಅಭಿವೃದ್ದಿ ಕ್ಲಬ್ ಹಾಗೂ ನಾಲಂದ ಚಾರಿಟೇಬಲ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ನವೋದ್ಯಮ ದಿನ ಇತ್ತೀಚೆಗೆ ಆಚರಿಸಲಾಯಿತು. ಕೇರಳ ರಾಜ್ಯ ಕಿರು ಕೈಗಾರಿಕಾ ಘಟಕ ಕಾಸರಗೋಡು ಜಿಲ್ಲಾಧ್ಯಕ್ಷ ಎಸ್.ರಾಜಾರಾಮ ಪೆರ್ಲ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, "ನವೋದ್ಯಮದ ಪೂರ್ವಪೇಕ್ಷಿತ ಅಗತ್ಯ" ವಿಷಯದ ಕುರಿತು ತರಗತಿ ನೀಡಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥ ಶ್ರೀನಿಧಿ ಕೆ. ಅಧ್ಯಕ್ಷತೆ ವಹಿಸಿದ್ದರು. ಎನ್ನೆಸ್ಸೆ ಯೋಜನಾಧಿಕಾರಿ ವರ್ಷಿತ್ ಕೆ. ಹಾಗೂ ಉದ್ಯಮಶೀಲ ಅಭಿವೃದ್ದಿ ಕ್ಲಬ್ ಸಂಯೋಜಕಿ ಭವ್ಯ ಬಿ. ಕಾರ್ಯಕ್ರಮ ಸಂಯೋಜಿಸಿದರು. ಸ್ವಯಂ ಸೇವಕಿ ಶ್ರೀಲಕ್ಷ್ಮಿ ಸ್ವಾಗತಿಸಿದರು. ಪುನೀತ್ ವಂದಿಸಿದರು. ಹರ್ಷಿತಾ ನಿರೂಪಿಸಿದರು.

.jpg)
