HEALTH TIPS

ಮಹಾಕುಂಭ ಕಾಲ್ತುಳಿತದ ಬಳಿಕ ರಸ್ತೆ ಬಂದ್: ಭಕ್ತರ ಪರದಾಟ

 ಲಖನೌ: ಪ್ರಯಾಗರಾಜ್‌ ಕಡೆ ಸಾಗುವ ರಸ್ತೆಗಳನ್ನು ಅಧಿಕಾರಿಗಳು ಕಾಲ್ತುಳಿತದ ನಂತರ ಬಂದ್ ಮಾಡಿದ ಕಾರಣದಿಂದಾಗಿ, ಸಹಸ್ರಾರು ಮಂದಿ ಭಕ್ತರು ಮುಂದಕ್ಕೆ ಹೋಗಲೂ ಆಗದ, ಮರಳಲೂ ಆಗದ ಸ್ಥಿತಿಗೆ ಸಿಲುಕಿದ್ದಾರೆ.

ಲಖನೌ-ಪ್ರಯಾಗರಾಜ್‌ ಹೆದ್ದಾರಿ, ಬುಂದೇಲ್‌ಖಂಡ ಎಕ್ಸ್‌ಪ್ರೆಸ್‌ ಹೆದ್ದಾರಿ ಮತ್ತು ಇತರ ರಸ್ತೆಗಳಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ವರದಿಗಳು ಹೇಳಿವೆ. ಕೆಲವರನ್ನು ವಾಪಸ್ ಕಳುಹಿಸಲಾಗುತ್ತಿದೆ ಎನ್ನಲಾಗಿದೆ.

'ನಾವು ಇನ್ನೂ ಎಷ್ಟು ಹೊತ್ತು ಇಲ್ಲಿರಬೇಕು ಎಂಬುದು ಗೊತ್ತಾಗಿಲ್ಲ... ಮಹಾಕುಂಭದ ಸ್ಥಳದಲ್ಲಿ ಭಕ್ತರು ಭಾರಿ ಸಂಖ್ಯೆಯಲ್ಲಿ ಸೇರಿದ್ದಾರೆ, ಅಲ್ಲಿ ಜನರ ಸಂಖ್ಯೆ ಕಡಿಮೆ ಆದ ನಂತರವೇ ನಮ್ಮನ್ನು ಮುಂದಕ್ಕೆ ಬಿಡಲಾಗುತ್ತದೆ ಎಂದು ಹೇಳಲಾಗಿದೆ' ಎಂದು ರಾಯ್‌ಬರೇಲಿಯಲ್ಲಿ ನಿಂತಿರುವ ಭಕ್ತರೊಬ್ಬರು ತಿಳಿಸಿದ್ದಾರೆ.

ಕೆಲವು ಭಕ್ತರು ವಾಹನಗಳಿಂದ ಇಳಿದು ಕಾಲ್ನಡಿಗೆಯಲ್ಲೇ ಸಾಗುತ್ತಿದ್ದಾರೆ. ಇನ್ನು ಕೆಲವರು ಮಹಾಕುಂಭ ನಡೆಯುತ್ತಿರುವ ಸ್ಥಳಕ್ಕೆ ತೆರಳುವ ಬದಲು ವಿಶ್ವನಾಥನ ದರ್ಶನಕ್ಕೆ ಕಾಶಿಗೆ ತೆರಳುತ್ತಿದ್ದಾರೆ.

ಮಹಾಕುಂಭಕ್ಕೆ ತೆರಳುವ ಕೆಲವು ವಿಶೇಷ ರೈಲುಗಳ ಸಂಚಾರವನ್ನು ಮಧ್ಯದಲ್ಲಿಯೇ ತಡೆಯಲಾಗಿದೆ ಎಂದು ವರದಿಗಳು ಹೇಳುತ್ತಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries