ಶಬರಿಮಲೆ : ಶಬರಿಮಲೆ ಶ್ರೀ ಶಾಸ್ತ ಸಭಾಂಗಣದಲ್ಲಿ ಅಯ್ಯಪ್ಪನ ಕಥೆಗಳನ್ನು ವಿವರಿಸುವ ಭಕ್ತಿಗೀತೆಯಾದ ಶಾಸ್ತಾಪಾಟ್ಟ್ ಅನ್ನು ಶುಕ್ರವಾರ ನಡೆಸಲಾಯಿತು, ಶಾಸ್ತಾಪಾಟ್ಟ್ ಭಕ್ತಿಸಾಂಧ್ರವಾಗಿ ಭಕ್ತರ ಮನಗೆಲ್ಲುವಲ್ಲಿ ಸಾರ್ಥಕತೆ ಪಡೆಯಿತು.
ವಡಕ್ಕಂಚೇರಿಯ ಪುನ್ನಂಬರಂಬ ಸುಬ್ರಮಣಿಯಂ ನೇತೃತ್ವದ ತಂಡ ಅಯ್ಯಪ್ಪ ಸ್ವಾಮಿಗೆ ಗೌರವ ಸಲ್ಲಿಸುವ ಸಲುವಾಗಿ ಶಾಸ್ತಾಪಾಟ್ಸ್ ಅನ್ನು ಪ್ರದರ್ಶಿಸಿತು. ಪ್ರತಿ ವರ್ಷ ಮಕರ ಬೆಳಕು ಉತ್ಸವದ ಬಳಿಕ, ಅವರು ಸನ್ನಿಧಾನದಲ್ಲಿ ಶಾಸ್ತಾಪಾಟ್ಟ್ ಹಾಡುವುದು ರೂಢಿ. ಇಂದು(ಶನಿವಾರ) ಸಭಾಂಗಣದಲ್ಲಿ ಸುಬ್ರಮಣ್ಯಂ ಅವರ ಶಿಷ್ಯರ ನೇತೃತ್ವದಲ್ಲಿ ಶಾಸ್ತಾಪಾಟ್ಟ್ ನಡೆಯಲಿದೆ.




.jpg)
