ಪೆರ್ಲ: ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ನಿರ್ಮಾಣದಲ್ಲಿ ರಂಗಭೂಮಿಯ ಪರಿಚಯ ಹೆಚ್ಚು ಪರಿಣಾಮಕಾರಿ. ಕಾಸರಗೋಡಿನ ರಂಗಭೂಮಿ ಚಟುವಟಿಕೆಗಳಲ್ಲಿ ರಂಗ ಚಿನ್ನಾರಿಯ ಕೊಡುಗೆ ಮಹತ್ತರವಾದುದು ಎಂದು ಕೇರಳ ರಾಜ್ಯ ಕಿರು ಕೈಗಾರಿಕಾ ನಿಗಮದ ಜಿಲ್ಲಾಧ್ಯಕ್ಷ ರಾಜಾರಾಮ ಪೆರ್ಲ ಅಭಿಪ್ರಾಯಪಟ್ಟರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಸಹಯೋಗ ಮತ್ತು ನಾಲಂದ ಚಾರಿಟೆಬಲ್ ಟ್ರಸ್ಟ್ ಸಹಕಾರದಲ್ಲಿ ಕಾಸರಗೋಡಿನ ಸಾಂಸ್ಕøತಿಕ, ಸಾಮಾಜಿಕ ಸಂಸ್ಥೆಯಾದ ರಂಗಚಿನ್ನಾರಿ ಬಳಗ ‘ಕಾಲೇಜು ರಂಗ ಭೂಮಿ ಬೆಳೆಸೋಣ'ಕಾರ್ಯಕ್ರಮದಂಗವಾಗಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಶುಕ್ರವಾರ ನಾಲಂದ ಕಾಲೇಜಲ್ಲಿ ಆಯೋಜಿಸಲಾಗಿದ್ದ ರಂಗ ಕಾರ್ಯಾಗಾರ' ರಂಗ ಸಂಸ್ಕøತಿ'ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಂಗಭೂಮಿ-ಚಲಚಿತ್ರ ಸಹಿತ ಸಾಂಸ್ಕøತಿಕ ಕ್ಷೇತ್ರಕ್ಕೆ ಕಾಸರಗೋಡಿನ ಹೆಮ್ಮೆಯಾಗಿ ಕಾಸರಗೋಡು ಚಿನ್ನಾ ಹಾಗೂ ಅವರು ಹುಟ್ಟಿಹಾಕಿರುವ ರಂಗಚಿನ್ನಾರಿ ಸಹಿತ ಸಂಸ್ಥೆಗಳು ನೀಡುತ್ತಿರುವ ಕೊಡುಗೆ ಎಂದಿಗೂ ಮಹತ್ತರವಾದುದು. ಇಲ್ಲಿಒಯ ಬಹುಭಾಷೆ-ಸಂಸ್ಕøತಿಗಳ ಪುನರುಜ್ಜೀವನಕ್ಕೆ ಹೊಸ ಆಯಾಮಗಳಲ್ಲಿ ರಂಗಕಲೆಗಳು ಬೆಳೆದುಬರಬೇಕು. ಇವುಗಳ ಬೆಳವಣಿಗೆಯಲ್ಲಿ ಹಿಮ್ಮುಖ ದೃಷ್ಟಿಕೋನ ಸಲ್ಲದೆಂದು ಅವರು ತಿಳಿಸಿದರು.
ನಾಲಂದ ಕಾಲೇಜು ಪ್ರಾಂಶುಪಾಲ ಶಂಕರ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ಪ್ರಶಸ್ತಿ ವಿಜೇತ ರಂಗನಿರ್ದೇಶಕ, ಚಲನಚಿತ್ರ ನಟ, ರಂಗಚಿನ್ನಾರಿ ನಿರ್ದೇಶಕ ಕಾಸರಗೋಡು ಚಿನ್ನಾ ಈ ಸಂದರ್ಭ ಮಾತನಾಡಿ, ನಾನು ಅಲ್ಲ, ನಾವು ಎಂಬುದನ್ನು ರಂಗ ಶಿಕ್ಷಣ ಕಲಿಸುತ್ತದೆ. ಪರಿಸ್ಪರ ಗೌರವಿಸುವ, ಮಾನವೀಯತೆಯ ಬದುಕು ಸಾಗಿಸುವ, ಮನುಷ್ಯ ಸಂಬಂಧ ಬಲಗೊಳಿಸುವ ಶಕ್ತಿ ರಂಗಭೂಮಿಗಿದೆ ಎಮದವರು ತಿಳಿಸಿದರು.ಪ್ರತಿಯೊಬ್ಬರಲ್ಲೂ ಪ್ರತಿಭೆ ಇರುತ್ತದೆ. ಗುರುತಿಸಿ ಬೆಂಬಲಿಸಬೇಕಾದ್ದು ನಾಗರಿಕ ಪ್ರಪಂಚದ ಕರ್ತವ್ಯ. ಮನುಷ್ಯರನ್ನಾಗಿ ಬೆಳೆಸುವ, ಸಂಸ್ಕøತಿ ಕಲಿಸುವ ಕೆಲಸ ಆಗಬೇಕು ಎಂದವರು ಸೂಚಿಸಿದರು.
ರಂಗಚಿನ್ನಾರಿ ನಿರ್ದೇಶಕ ಕೋಳಾರು ಸತೀಶ್ಚಂದ್ರ ಭಂಡಾರಿ, ಡಾ.ಶ್ರೀಪತಿ.ಕಜಂಪಾಡಿ, ನಾಲಂದ ಕಾಲೇಜು ಸಲಹಾ ಸಮಿತಿ ಸದಸ್ಯ ರಾಜಶೇಖರ ಉಪಸ್ಥಿತರಿದ್ದು ಶುಭಹಾರೈಸಿದರು. ವಿದ್ಯಾರ್ಥಿನಿ ನವ್ಯಶ್ರೀ ಸ್ವಾಗತಿಸಿ, ಹರ್ಷಿತ ವಂದಿಸಿದರು. ಪ್ರಾಧ್ಯಾಪಕಿ ದಿಶಾ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ದಿನಪೂರ್ತಿ ರಂಗಸಜ್ಜಿಕೆ, ರಂಗಾಭಿನಯ, ನಟನಾ ಕೌಶಲ, ವಾಕ್ಪಟುತ್ವ, ಪ್ರೇಕ್ಷಕ ನಿರ್ವಹಣೆ, ರಂಗಗೀತೆಗಳ ಆಳ-ಅಗಲದ ಬಗ್ಗೆ ಸಮಗ್ರ ತರಬೇತಿ ನಡೆಯಿತು. ಕಾಸರಗೋಡು ಚಿನ್ನಾ ಹಾಗೂ ಕೋಳಾರು ಸತೀಶ್ಚಂದ್ರ ಭಂಡಾರಿ ನಿರ್ವಹಿಸಿದರು.



.jpg)
.jpg)
.jpg)
.jpg)
.jpg)
