ಕಾಸರಗೋಡು: ಪೊವ್ವಲ್ ಎಲ್‍ಬಿಎಸ್ ಇಂಜಿನಿಯರಿಂಗ್ ಕಾಲೇಜಿಗೆ ಕೇಂದ್ರ ಸರ್ಕಾರದ 'ಐಡಿಯಾ ಲ್ಯಾಬ್' ಅನುಮತಿ ದೊರೆತಿದೆ. ಉನ್ನತ ಶಿಕ್ಷಣ ಕ್ಷೇತ್ರದಲ್ಲಿನ ಶ್ರೇಷ್ಠತೆಯಿಂದಾಗಿ ಕೆಲವೇ ಕಾಲೇಜುಗಳಿಗೆ ಮಾತ್ರ ಲಭ್ಯವಿರುವ ಈ ಯೋಜನೆಯಲ್ಲಿ ಎಲ್‍ಬಿಎಸ್ ಕಾಲೇಜನ್ನು ಒಳಪಡಿಸಲಾಗಿದೆ. ಪ್ರಸಕ್ತ ತನ್ನ ಎಲ್ಲಾ ಕಾರ್ಯಕ್ರಮಗಳ ಶ್ರೇಷ್ಠ ನಿರ್ವಹಣೆಗಾಗಿ ಈ ಅನುಮತಿ ಲಭಿಸಿದೆ.
ಲೇಸರ್ ಕಟಿಂಗ್ ಮೆಷಿನ್, ಸಿಎನ್‍ಸಿ ರೂಟರ್, ಪಿಸಿಬಿ ಬಿಲ್ಡಿಂಗ್ ಮೆಷಿನ್, ಪಿಸಿಬಿ ಪೆÇ್ರಟೊಟೈಪ್ ಮೆಷಿನ್, ಕಂಪ್ಯೂಟರ್ ವರ್ಕ್ ಸ್ಟೇಷನ್, ಸ್ಮಾರ್ಟ್ ಬೋರ್ಡ್, ಎಚ್‍ಡಿ ಪ್ರಿಂಟರ್, ಮಿನಿ ಡೆಸ್ಕ್‍ಟಾಪ್ ಮೆಷಿನ್,Iಆಇಂ ಲ್ಯಾಬ್ ಮಿಶ್ರ ಸಿಗ್ನಲ್ ಆಸಿಲ್ಲೋಸ್ಕೋಪ್‍ನಂತಹ ಉಪಕರಣಗಳೊಂದಿಗೆ ಎಲ್‍ಬಿಎಸ್ ಇಂಜಿನಿಯರಿಂಗ್ ಕಾಲೇಜು ಸುಸಜ್ಜಿತವಾಗಿದೆ.
ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಉದ್ಯಮವನ್ನು ಸಂಘಟಿಸಿ ಸುಧಾರಿತ ತಂತ್ರಜ್ಞಾನದ ಸಹಾಯದಿಂದ ಸ್ಥಳೀಯ ಸಮಸ್ಯೆಗಳನ್ನು ಗುರುತಿಸಲು ಮತ್ತು ಅವುಗಳನ್ನು ಪರಿಹರಿಸುವ ಗುರಿಯನ್ನು ಹೊಂದುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಇದಕ್ಕಾಗಿ ಜಿಲ್ಲೆಯ ಒಳಗಿನ ಮತ್ತು ಸಮೀಪದ ಸಂಶೋಧನಾ ಸಂಸ್ಥೆಗಳು ಮತ್ತು ಕೈಗಾರಿಕಾ ಸಂಸ್ಥೆಗಳ ಸಹಯೋಗದಲ್ಲಿ ಯೋಜನೆಯು ಮುಂದುವರಿಯಲಿದೆ.




.jpeg)
