ಕಾಸರಗೋಡು: ವಿದ್ಯಾನಗರದ ನಗರಸಭಾ ಕ್ರೀಡಾಂಗಣದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸಿ ಜಿಲ್ಲೆಗೆ ಖ್ಯಾತಿ ತಂದುಕೊಟ್ಟ ಪ್ರತಿಭೆಗಳನ್ನು ಸನ್ಮಾನಿಸಲಾಗುವುದು.
ಜುಲೈ 2024 ರಲ್ಲಿ ಥೈಲ್ಯಾಂಡ್‍ನಲ್ಲಿ ನಡೆದ ಜಿ-20 ಯುಎನ್‍ಸಿಸಿಡಿ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಪತ್ತು ನಿರ್ವಹಣೆ, ಜೀವವೈವಿಧ್ಯ ಮತ್ತು ಕಾರ್ಬನ್ ತಟಸ್ಥಿಕರಣ ಮೊದಲಾದವುಗಳ ಕುರಿತು ಪ್ರಬಂಧ ಮಂಡಿಸಿದ ಕಾಸರಗೋಡು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ. ಬೇಬಿ ಬಾಲಕೃಷ್ಣನ್, 2024ರಲ್ಲಿ ಫಿಲಿಪೈನ್ಸ್‍ನ ಮನಿಲದಲ್ಲಿ ನಡೆದ ಏಷ್ಯಾ ಫೆಸಿಫಿಕ್ ಮಿನಿಸ್ಟೀರಿಯಲ್ ಸಮ್ಮೇಳನದಲ್ಲಿ ಲೋಕಲ್ ಲೀಡರ್ ಚಾಂಪಿಯನ್ ಆಗಿ ಆಯ್ಕೆಯಾದ ವಲಿಯಪರಂಬ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ ವಿ ಸಜೀವನ್, ಭಾರತ ಸರ್ಕಾರದ ಯೂತ್ ಎಕ್ಸ್‍ಚೇಂಜ್ ಕಾರ್ಯಕ್ರಮದ ಅಂಗವಾಗಿ 2024 ಡಿಸೆಂಬರ್ ನಲ್ಲಿ ನಡೆದ ಭೂತಾನ್ ಸಂದರ್ಶನಕ್ಕೆ ಆಯ್ಕೆಯಾಗಿ ಕೇರಳದ ಹೆಮ್ಮೆಯ ಪುತ್ರ ಎನ್ ಸಿ ಸಿ 32 ಕೇರಳ ಬೆಟಾಲಿಯನ್, ಕಾಞಂಗಾಡ್ ನೆಹರು ಕಲಾ ಹಾಗೂ ವಿಜ್ಞಾನ ಕಾಲೇಜು ಘಟಕದ ಹಿರಿಯ ಅಂಡರ್ ಅಫೀಸರ್ ಆದ ಎನ್. ನಂದಕಿಶೋರ್. 2024ರಲ್ಲಿ ಕಾಸರಗೋಡಿನಲ್ಲಿ ನಡೆದ ರಾಜ್ಯ ನಾಗರಿಕ ಸೇವಾ ವಿಭಾಗದ ಕಬಡ್ಡಿ ವಿಜೇತರಾದ ಕಾಸರಗೋಡು ಜಿಲ್ಲಾ ಮಹಿಳಾ ಕಬಡ್ಡಿ ತಂಡವನ್ನು ಗಣರಾಜ್ಯೋತ್ಸವದಂದು ಸನ್ಮಾನಿಸಲಾಗುವುದು.




