ಕಾಸರಗೋಡು: ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರವು ಆಯೋಜಿಸಿರುವ 'ಬೇಕಲ್ ಹ್ಯಾಪಿನೆಸ್ ಫೆಸ್ಟ್-2025' ಕಾರ್ಯಕ್ರಮವನ್ನು ನೋಂದಣಿ, ಪ್ರಾಚ್ಯವಸು ಮತ್ತು ವಸ್ತುಸಂಗ್ರಹಾಲ ಖಾತೆ ಸಚಿವ ರಾಮಚಂದ್ರನ್ ಕಡನ್ನಪಳ್ಳಿ ಉದ್ಘಾಟಿಸಿದರು.
ಶಾಸಕ ಸಿ. ಎಚ್. ಕುಂಜಂಬು ಅಧ್ಯಕ್ಷತೆ ವಹಿಸಿದ್ದರು. ಶಾಸಕ ಇ. ಚಂದ್ರಶೇಖರನ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶಾನವಾಸ್ ಪಾದೂರು, ಚಿತ್ರನಟ ಕೈಲಾಶ್, ಪಳ್ಳಿಕ್ಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ. ಕುಮಾರನ್, ಮಾಜಿ ಶಾಸಕ ಕೆ.ವಿ.ಕುಞÂರಾಮನ್, ಎಂ. ಮನು, ಸಿ.ಜೆ.ಸಜಿತ್, ಗೋಲ್ಡನ್ ಅಬ್ದುಲ್ ರೆಹಮಾನ್, ಜಿಲ್ಲಾ ಕೈಗಾರಿಕಾ ಕೇಂದ್ರ ಮಹಾಪ್ರಬಂಧಕ ಕೆ.ಸಜಿತ್ ಕುಮಾರ್, ಶಿಜಿನ್ ಪರಂಪತ್, ಕೆ.ಕೆ. ಅಬ್ದುಲ್ ಲತೀಫ್, ಜಿಲ್ಲಾ ಪಂಚಾಯತ್ ಕಾರ್ಯದರ್ಶಿ ಎಸ್.ಶ್ಯಾಮಲಕ್ಷ್ಮಿ ಉಪಸ್ಥಿತರಿದ್ದರು. ವಿವಿಧ ವಲಯಗಳಲ್ಲಿ ಮಿಂಚಿದ್ದ ಪರಪ್ಪ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಎಂ. ಲಕ್ಷ್ಮಿ, ಕುಣಿಯ ಸಮೂಹಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಟಿ.ಎ. ನಿಸಾರ್, ರತೀಶ್ ಪಿಲಿಕೋಡ್, ಆಯೇಷಾ ಫಜಲುಲ್ ರೆಹಮಾನ್, ಆಯಿಷತ್ ನಿದಾ ಮೊದಲಾದವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿಬಾಲಕೃಷ್ಣನ್ ಸ್ವಾಗತಿಸಿದರು. ಶಬರೀಶ್ ವಂದಿಸಿದರು.





