ಮಂಜೇಶ್ವರ: ವಿವಾಹ ಸಿದ್ಧತೆಯಲ್ಲಿದ್ದ ಯುವಕನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೀಂಜ ಪಂಚಾಯಿತಿ, ಬೆಜ್ಜ ಐಎಚ್‍ಡಿಪಿ ಕಾಲನಿ ನಿವಾಸಿ, ತನಿಯಪ್ಪ ಎಂಬವರ ಪುತ್ರ ಅಜಿತ್‍ಕುಮಾರ್(28)ಮೃತಪಟ್ಟ ಯುವಕ.
ಮನೆಯವರು ವಿವಾಹ ಸಂಬಂಧ ಸಾಮಗ್ರಿ ಖರೀದಿಗಾಗಿ ಹೊರಗೆ ತೆರಳಿ ವಾಪಸಾದಾಗ ಅಜಿತ್‍ಕುಮಾರ್ ಮನೆ ಸನಿಹದ ಮರದಲ್ಲಿ ನೇಣಿನಲ್ಲಿ ನೇತಾಡುತ್ತಿರುವುದು ಕಂಡುಬಂದಿದ್ದು, ತಕ್ಷಣ ಇವರನ್ನು ಕೆಳಗಿಳಿಸಿ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಸಾವು ಸಂಭವಿಸಿದೆ. ಸಿಪಿಐ ಸಕ್ರಿಯ ಕಾರ್ಯಕರ್ತ, ಎಐವೈಎಫ್ ಬೆಜ್ಜ ಯೂನಿಟ್ ಕಾರ್ಯಕರ್ತರಾಗಿದ್ದ ಇವರು ಮಜಿಬೈಲ್ ಸೇವಾ ಸಹಕಾರಿ ಬ್ಯಾಂಕ್ ಉಪ್ಪಳ ಶಾಖೆಯ ರಾತ್ರಿ ಕಾವಲುಗಾರನಾಗಿ ದುಡಿಯುತ್ತಿದ್ದರು. ಹೊಸಂಗಡಿಯ ಅಂಗಡಿಪದವು ಸನಿಹದ ಯುವತಿ ಜತೆ ಅಜಿತ್‍ಕುಮಾರ್ ವಿವಾಹ ನಿಶ್ಚಯವಾಘಿದ್ದು, ಫೆ. 2ರಂದು ಐಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವಿವಾಹ ನೆರವೇರುವುದಿತ್ತು. ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.





