ಕಾಸರಗೋಡು: ಜಿಲ್ಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಸಾಕ್ಷರತಾ ಮಿಷನ್ ಮೂಲಕ ನಡೆಸಿದ 10ನೇ ತರಗತಿಯ ಸಮಾನತೆ ಪರೀಕ್ಷೆಯಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕ ಗಳಿಸಿದ 122 ಹಿರಿಯ ವಿದ್ಯಾರ್ಥಿಗಳನ್ನು ಜಿಲ್ಲಾ ಸಾಕ್ಷರತಾ ಮಿಷನ್, ಕಾಸರಗೋಡು ಇವರ ಆಶ್ರಯದಲ್ಲಿ ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಾನವಾಸ್ ಪಾದೂರು ಸಮರಂಭ ಉದ್ಘಾಟಿಸಿ, ವಿಜೇತರನ್ನು ಸನ್ಮಾನಿಸಿದರು.
10ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಕುತ್ತಿಕೋಲ್ ಕರಿವೇಡಗಂ ನಿವಾಸಿ 72 ವರ್ಷದ ಪಿ.ಜೆ.ಆಂಟೋನಿ ಹಿರಿಯ ಪರೀಕ್ಷಾರ್ಥಿಯಾಗಿದ್ದರು. ಹತ್ತನೇ ತರಗತಿ ಮತ್ತು ಹೈಯರ್ ಸೆಕೆಂಡರಿ ಸಮಾನಾಂತರ ಪರೀಕ್ಷೆಯಲ್ಲಿ ಕಾಞಂಗಾಡಿನ ಎಂ.ಎಂ.ಸಜಿನಾ ಮತ್ತು ಕಳನಾಡಿನ ವಹೀದಾ ಮುಮ್ತಾಜ್ ಪಿ.ಎಂ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಪಡೆದಿದ್ದಾರೆ.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಶಿಕ್ಷಣ ಉಪನಿರ್ದೇಶಕ ಟಿ.ವಿ.ಮಧುಸೂದನ್ ವಹಿಸಿದ್ದರು. ಡಯಟ್ ಪ್ರಾಂಶುಪಾಲ ಡಾ.ರಘುರಾಮ ಭಟ್, ಸಾಕ್ಷರತಾ ಮಿಷನ್ ಜಿಲ್ಲಾ ಸಂಯೋಜಕ ಪಿ.ಎನ್.ಬಾಬು, ಜಿಲ್ಲಾ ಸಾಕ್ಷರತಾ ಸಮಿತಿ ಸದಸ್ಯ ಟಿ.ಎಂ.ಎ.ಕರೀಂ, ಜಿಲ್ಲಾ ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆ ಅಧಿಕಾರಿ ಕೆ.ವಿ.ರವಿರಾಜ್, ನೋಡಲ್‍ಪ್ರೇರಕ್ ತಂಗಮಣಿ, ಹಿರಿಯ ಕಲಿಕಾರ್ಥಿ ಪಿ.ಜೆ.ಆಂಟನಿ ಉಪಸ್ಥಿತರಿದ್ದರು. ಉನ್ನತ ಅಂಕ ಪಡೆದ ಆಂಟೋನಿ, ಸಜಿನಾ ಎಂ.ಎಂ, ವಹೀದಾ ಮುಮ್ತಾಜ್, ಎಂ.ಸೆಮೀರ್, ಪಿ.ಫಾರೂಕ್, ಬಶೀರ್ ಕುಂಬಳೆ, ಮಧುಸೂದನನ್ ನಂಬಿಯಾರ್ ಮತ್ತು ಪ್ರವೀಣ ಮುಳ್ಳೇರಿಯಾ ಅನುಭವ ಹಂಚಿಕೊಮಡರು. ಸಾಕ್ಷರತಾ ಮಿಷನ್ ಪ್ರವರ್ತಕರಾದ ಕೆ.ವಿ.ಪುಷ್ಪ ಕುಮಾರಿ, ಎಂಗಿತಾ, ಗ್ರೇಸಿ ವೇಗಸ್, ಪಿ.ರಜನಿ, ಪಿ.ನಾರಾಯಣಿ, ಎ.ಚಿತ್ರಾ, ಉಷಾ ಬಿ, ನಿರ್ಮಲಕುಮಾರಿ, ಕೆ.ವಿಲಾಸಿನಿ ಎ.ಸುಚಿತ್ರಾ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಜಿಲ್ಲೆಯಲ್ಲಿ 599 ವಯಸ್ಕರು 10ನೇ ಒಟ್ಟು 578 ವಿದ್ಯಾರ್ಥಿಗಳು ತರಗತಿ ಸಮಾನತೆ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಗಳೊಂದಿಗೆ ಉತ್ತೀರ್ಣರಾಗಿದ್ದು, ಶೇ 96.5 ಫಲಿತಾಂಶ ದಾಖಲಾಗಿದೆ.


