ಬದಿಯಡ್ಕ: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರು ಬಿಡುಗಡೆಗೊಳಿಸಿದರು.
ಶ್ರೀವಿಷ್ಣುಮಂಗಲ ದೇವಾ;ಯದ ವಾರ್ಷಿಕೋತ್ಸವ ಸಾಂಪ್ರದಾಯಿಕ ಶ್ರದ್ಧಾ-ಭಕ್ತಿಗಳೊಂದಿಗೆ ಫೆ.12 ರಿಂದ 16ರ ವರೆಗೆ ನಡೆಯಲಿದೆ.
ಫೆ.12 ರಂದು ಬೆಳಿಗ್ಗೆ 9.30 ರಿಂದ ಧ್ವಜಾರೋಹಣ, ಶ್ರೀಭೂತಬಲಿ, ಹಸಿರುವಾಣಿ ಮೆರವಣಿಗೆ, ಉಗ್ರಾಣ ಮುಹೂರ್ತ, ರಾತ್ರಿ 7 ರಿಂದ ದೀಪೋತ್ಸವ ನಡೆಯಲಿದೆ.
ಫೆ.13 ರಂದು ಬೆಳಿಗ್ಗೆ 9.30 ರಿಂದ ಶ್ರೀಭೂತಬಲಿ, ರಾತ್ರಿ 7 ರಿಂದ ದೀಪೋತ್ಸವ ನಡೆಯಲಿದೆ.
ಫೆ.14 ರಂದು ಬೆಳಿಗ್ಗೆ 9.30 ರಿಂದ ಶ್ರೀಭೂತಬಲಿ, ರಾತ್ರಿ 8 ರಿಂದ ನಡುದೀಪೋತ್ಸವ ನಡೆಯಲಿದೆ.
ಫೆ.15 ರಂದು ಬೆಳಿಗ್ಗೆ 9.30 ರಿಂದ ಶ್ರೀಭೂತಬಲಿ, ರಾತ್ರಿ 8 ರಿಂದ ಬೆಡಿ ಉತ್ಸವ, ರಾತ್ರಿ 11 ರಿಂದ ಶ್ರೀಎಡನೀರು ಮಠದ ಮುಂಭಾಗ ಪುಷ್ಪರಥೋತ್ಸವ ನಡೆಯಲಿದೆ.
ಫೆ.16 ರಂದು ಬೆಳಿಗ್ಗೆ 8.30 ರಿಂದ ಶಯನೋದ್ಘಾಟನೆ, ಮಂಗಳಾಭಿಷೇಕ, ಸಂಜೆ 5.30 ರಿಂದ ಶ್ರೀಎಡನೀರು ಮಠದ ಮುಂಭಾಗ ನೃತ್ಯೋತ್ಸವ, ತೆಪ್ಪೋತ್ಸವ, ಅವಭೃತ ಸ್ನಾನ, ಪ್ರಸಾದ ವಿತರಣೆ, ಧ್ವಜಾವರೋಹಣ ನಡೆಯಲಿದೆ.

.jpg)

