HEALTH TIPS

ಕಾಸರಗೋಡು ವಲಯ ಐಸಿವೈಎಂ ಕಲೋತ್ಸವ : ನಾರಂಪಾಡಿ ಚರ್ಚ್ ಚಾಂಪ್ಯನ್

ಬದಿಯಡ್ಕ: ಕಾಸರಗೋಡು ವಲಯ ಇಂಡಿಯನ್ ಕ್ಯಾಥೋಲಿಕ್ ಯೂತ್ ಮೂವ್‍ಮೆಂಟ್(ಐಸಿವೈಎಂ) ಮತ್ತು ಕ್ರೈಸ್ಟ್ ಕಿಂಗ್ ಯೂತ್ ಮೂವ್‍ಮೆಂಟ್(ಸಿಕೆವೈಎಂ) ಕಯ್ಯಾರ್ ಜಂಟಿಯಾಗಿ ಆಯೋಜಿಸಿದ್ದ ಕಲೋತ್ಸವ  2025 ಪ್ರತಿಭಾ ವೇದಿಕೆಯಾಯಿತು. ಕಯ್ಯಾರ್ ಕ್ರಿಸ್ತರಾಜ ಚರ್ಚ್ ಮೈದಾನದಲ್ಲಿ  ನಡೆದ ಎರಡು ದಿನಗಳ ಕಲೋತ್ಸವದಲ್ಲಿ ಕಾಸರಗೋಡು ವಲಯದ 16 ಚರ್ಚುಗಳ ಹಿರಿಯರು, ಮಕ್ಕಳು, ಯುವಕ ಯುವತಿಯರು ಉತ್ಸವದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದರು. ಜೊತೆಗೆ ವಿವಿಧ ಚಟುವಟಿಕಾ ಸ್ಪರ್ಧೆಗಳು ನಡೆದವು

ನೂರಾರು ಜನರು ಈ ಕಲೋತ್ಸವವನ್ನು ವೀಕ್ಷಿಸಲು ಆಗಮಿಸಿದ್ದು, ಉತ್ಸವವು ಅಪಾರ ಯಶಸ್ಸನ್ನು ಕಂಡಿತು. ಉತ್ಸಾಹಭರಿತ ಸ್ಪರ್ಧೆ ಮತ್ತು ಸಂಭ್ರಮದ ನಡುವೆ, ಉತ್ಸಾಹದ ಅಲೆಯಾಗಿ ಮಾರ್ಪಟ್ಟಿತ್ತು. ಈ ಮನೋರಂಜನಾತ್ಮಕ ಕಾರ್ಯಕ್ರಮವು ಭಾಗವಹಿಸಿದವರ ಮತ್ತು ಪ್ರೇಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಕಲೋತ್ಸವದಲ್ಲಿ ನಾರಂಪಾಡಿ ಚರ್ಚ್ ಚಾಂಪ್ಯನ್ ಆಗಿ ಹೊರಹೊಮ್ಮಿದರೆ, ವರ್ಕಾಡಿ ಚರ್ಚ್ ದ್ವಿತೀಯ ಹಾಗೂ ಕಯ್ಯಾರ್ ಚರ್ಚ್ ತೃತೀಯ ಸ್ಥಾನ  ಪಡೆಯಿತು.

ಉದ್ಘಾಟನಾ ದಿನದಂದು ನಡೆದ ಸಮಾರಂಭದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಐಸಿವೈಎಂ ನಿರ್ದೇಶಕ ಫಾ.ಅಶ್ವಿನ್ ಲೋಹಿತ್ ಕಾರ್ಡೋಜ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದಾಯ್ಜಿವಲ್ಡ್‍ನ  ವ್ಯವಸ್ಥಾಪಕ ನಿರ್ದೇಶಕ ವಾಲ್ಟರ್ ನಂದಳಿಕೆ, ಚಿತ್ರ ನಟಿ ವೆನ್ಸಿಟಾ ಡಯಾಸ್, ನಿಟ್ಟೆ ಎಂಜಿನೀಯರಿಂಗ್ ಕಾಲೇಜಿನ ಡಾ.ಮೆಲ್ವಿನ್ ಫೆರ್ನಾಲ್ ಉಪಸ್ಥಿತರಿದ್ದರು. ಕುಂಬಳೆ ಠಾಣಾ ಸರ್ಕಲ್ ಇನ್ಸ್ ಪೆಕ್ಟರ್ ವಿನೋದ್ ಕುಮಾರ್ ಶುಭಹಾರೈಸಿದರು.

ಐಸಿವೈಎಂ ಕಾಸರಗೋಡು ವಲಯ ನಿರ್ದೇಶಕ ಫಾ.ವಿಶಾಲ್ ಮೋನಿಸ್, ಅನಿಮೇಟರ್ ಸಿಸ್ಟರ್ ಸೆವ್ರಿನ್ ಡಿ'ಕುನ್ಹಾ , ಐಸಿವೈಎಂ ವಲಯ ಅಧ್ಯಕ್ಷ ಮೆಲ್ವಿನ್ ಡಿ'ಸೋಜ, ಕಾರ್ಯದರ್ಶಿ ನೀಮಾ ಡಿ'ಸಿಲ್ವಾ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ರೋಶನ್ ಡಿ'ಸೋಜ, ಕಾರ್ಯದರ್ಶಿ ಝೀನಾ ಡಿ'ಸೋಜ, ಸಿ.ಕೆ.ವೈ.ಎಂ. ಕಯ್ಯಾರ್ ಘಟಕದ ಅಧ್ಯಕ್ಷ ಪ್ರೀಮಲ್ ಡಿ'ಸೋಜ, ಕಾರ್ಯದರ್ಶಿ ಜೋಯಲ್ ಕಿಶನ್ ಮೊದಲಾದವರು ಉಪಸ್ಥಿತರಿದ್ದರು. ಸಮಾರೋಪ ಸಮಾರಂಭದಲ್ಲಿ ಕಾಸರಗೋಡು ವಲಯ ವಿಗಾರ್‍ವಾರ್ ಫಾ.ಸ್ಟ್ಯಾನಿ ಪಿರೇರಾ ಅಧ್ಯಕ್ಷತೆ ವಹಿಸಿದ್ದರು. ದಾಯ್ಜಿ  ವಲ್ಡ್‍ನ  ಪೆÇ್ರಡಕ್ಷನ್ ಡೈರೆಕ್ಟರ್ ಸ್ಟ್ಯಾನಿ ಬೇಳ, ಚಿತ್ರ ನಟಿ ಅಶ್ವಿನಿ ಡಿ'ಕೋಸ್ಟ, ಕನ್ನಡ ಬಿಗ್ ಬಾಸ್‍ನ ರೀಮಾ ಡಯಾಸ್ ಹಾಗೂ ಐಸಿವೈಎಂ ಕೇಂದ್ರೀಯ ಸಮಿತಿ ಪದಾಧಿಕಾರಿಗಳು  ಉಪಸ್ಥಿತರಿದ್ದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries