HEALTH TIPS

ಕಾಸರಗೋಡು ಜಿಲ್ಲಾ ಬಂಟರ ಸಂಘದ ಆಶ್ರಯದಲ್ಲಿ ಹುಟ್ಟೂರ ಸನ್ಮಾನ

ಉಪ್ಪಳ: ಕಾಸರಗೋಡು ಜಿಲ್ಲಾ ಬಂಟರ ಸಂಘದ ಆಶ್ರಯದಲ್ಲಿ ತುಳುನಾಡ ಬಂಟ ಸುಪುತ್ರರಿಗೆ ಹುಟ್ಟೂರ ಸನ್ಮಾನ ಕಾರ್ಯಕ್ರಮ ಗುರುವಾರ ಐಲ ಶ್ರೀ ದುರ್ಗಾಪರಮೇಶ್ವರಿ ಕಲಾ ಭವನ  ಬಂಟರ ಸಂಘದ ಅಧ್ಯಕ್ಷ  ನ್ಯಾಯವಾದಿ ಸುಬ್ಬಯ್ಯ ರೈಯವರ ಅಧ್ಯಕ್ಷತೆಯಲ್ಲಿ ಜರಗಿತು. ತುಳುನಾಡಿನ  ಕೊಡುಗೈದಾನಿ, ಹಲವು ದೇವಸ್ಥಾನಗಳ ಜೀರ್ಣೋದ್ಧಾರ ಅಭಿವೃದ್ಧಿ ಹರಿಕಾರ, ಕರ್ನಾಟಕ ಸುವರ್ಣ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಮತ್ತು ಅಂತರಾಷ್ಟ್ರೀಯ ಆರ್ಯಭಟ ಪುರಸ್ಕೃತ ಕುತ್ತಿಕ್ಕಾರು ಕೆ.ಕೆ. ಶೆಟ್ಟಿ ಇವರಿಗೆ ಹುಟ್ಟೂರ ಸನ್ಮಾನ ಜರಗಿತು.


ಐಲ ಕ್ಷೇತ್ರದ ಪರಿಸರದಿಂದ ಕೊಂಬು ವಾದ್ಯ ಘೋಷಗಳೊಂದಿಗೆ ಅದ್ದೂರಿ ಮೆರವಣಿಗೆ ಜರಗಿತು. ಮಂಗಳೂರು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ದೀಪ ಪ್ರಜ್ವಲನೆ ಗೈದು  ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅಭ್ಯಾಗತರಾಗಿ  ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ಸದಸ್ಯೆ ಮಲ್ಲಿಕಾ ಪಕಳ, ಮುಂಬೈ ಉದ್ಯಮಿ ಸಂಜೀವ ಶೆಟ್ಟಿ ತಿಂಬರ, ಜಿಲ್ಲಾ ಸಮಿತಿ ಉಪಾಧ್ಯಕ್ಷ ಚಂದ್ರಹಾಸ ರೈ ಪೆರಡಾಲ ಗುತ್ತು, ಶ್ಯಾಮಲ ಶೆಟ್ಟಿ, ಸಂಜೀವ ಶೆಟ್ಟಿ  ಮೊಟ್ಟೆಕುಂಜ, ಕಿರಣ್ ಮಾಡ, ಗೋಪಾಲ ಶೆಟ್ಟಿ ಕುತ್ತಿಕಾರು, ಮಾಜಿ ಅಧ್ಯಕ್ಷ ಸದಾನಂದ ರೈ ಕಾಸರಗೋಡು, ಸುಬ್ಬಣ್ಣ ಶೆಟ್ಟಿ ಕುಚ್ಚಿಕ್ಕಾಡು, ದಾಮೋದರ ಶೆಟ್ಟಿ ಪಟ್ಲ, ನಿರಂಜನ್ ರೈ ಪೆರಡಾಲ, ವಸಂತ ರಾಜ್ ಶೆಟ್ಟಿ ಉಪಸ್ಥಿತರಿದ್ದರು. ನಾರಾಯಣ ಹೆಗ್ಡೆ ಕೋಡಿಬೈಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಮೋಹನ್ ರೈ ಸ್ವಾಗತಿಸಿ, ಜಿಲ್ಲಾ ಬಂಟರ ಸಂಘದ  ಕೋಶಾಧಿಕಾರಿ ಚಿದಾನಂದ ಆಳ್ವ ವಂದಿಸಿದರು. ಪಟ್ಲಗುತ್ತು ದಾಮೋದರ ಶೆಟ್ಟಿ ನೇತೃತ್ವ ವಹಿಸಿದ್ದರು. ಚೇತನ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.


ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಕುಮಾರಿ ಶರಣ್ಯ ರೈ ಕಳ್ಳಿಗೆ ಬೀಡು, ಪ್ರಸಂಶ ಶೆಟ್ಟಿ ತಾಲೆವು ಕುಂಜತ್ತೂರು ಇವರಿಂದ ಭರತನಾಟ್ಯ ಕಾರ್ಯಕ್ರಮ ಜರಗಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries