ಬದಿಯಡ್ಕ: ಕಾಸರಗೋಡು ಜಿಲ್ಲಾ ಶಿವಬ್ರಾಹ್ಮಣ ಸಂಘದ (ರಿ) ಇದರ ವಾರ್ಷಿಕ ಕ್ಯಾಲೆಂಡರನ್ನು ಸಂಘದ ಕಾರ್ಯಾಲಯ ಕಾಸರಗೋಡು ವಿಫ್ನೇಶ್ ನಿಲಯದಲ್ಲಿ ಗುರುವಾರ ಬಿಡುಗಡೆಗೊಳಿಸಲಾಯಿತು.
ಸಂಘದ ಅಧ್ಯಕ್ಷ ಶ್ರೀನಿವಾಸರಾವ್ ಪಿಲಿಕೂಡ್ಲು, ಗೌರವಾಧ್ಯಕ್ಷ ಸತ್ಯನಾರಾಯಣ ಮಾಸ್ತರ್ ಕಾಸರಗೋಡು, ಈಶ್ವರ ರಾವ್, ಯಂ ಗೋವಿಂದರಾಜ್ ಮೈಲ್‍ತ್ತೊಟ್ಟಿ, ಸದಸ್ಯೆ ಮಾಲತಿ ಜಿ, ವಿಘ್ನೇಶ್, ಶಿವಸುಂದರ್ ಉಪಸ್ಥಿತರಿದ್ದರು. ಸಂಘದ ಕೋಶಾಧಿಕಾರಿ ವೈ ರಮೇಶ ಕಾಸರಗೋಡು ಸ್ವಾಗತಿಸಿ, ಕಾರ್ಯದರ್ಶಿ ಸೀತಾರಾಮ ರಾವ್ ಪಿಲಿಕೂಡ್ಲು ವಂದಿಸಿದರು. ವಾರ್ಷಿಕ ಕ್ಯಾಲೆಂಡರನ್ನು ತಯಾರಿಸುವಲ್ಲಿ ಸಹಕರಿಸಿದ ಗೋವಿಂದರಾಜ್ ಮೈಲ್‍ತ್ತೊಟ್ಟಿ ಇವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.

.jpg)
