HEALTH TIPS

ಮರಣಾನಂತರ ಏನಾಗುತ್ತದೆ ? 'ಬದುಕಿನಾಚೆಗಿನ ಅನುಭವ' ಹಂಚಿಕೊಂಡ ಸಾವಿನ ಸಮೀಪಕ್ಕೆ ಹೋಗಿ ಬಂದ ಮಹಿಳೆ.!

ಮರಣಾನಂತರ ಏನಾಗುತ್ತದೆ? ಸ್ವರ್ಗ ಮತ್ತು ನರಕವಿದೆಯೇ ? ಇಂತಹ ಅಸ್ತಿತ್ವದ ಪ್ರಶ್ನೆಗಳು ಬಹಳ ಕಾಲದಿಂದ ಮಾನವಕುಲವನ್ನು ಕಾಡುತ್ತಿವೆ. ಈ ಸಂದರ್ಭದಲ್ಲಿ ಸಾವಿನ ಸಮೀಪದ ಅನುಭವಗಳನ್ನು ಅನುಭವಿಸಿದ ಜನರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದು, ಅದರ ಒಂದು ವರದಿ ಇಲ್ಲಿದೆ.

ವ್ಯಕ್ತಿಯೊಬ್ಬರು ನಿಧನರಾದ ನಂತರ ಅವರ ಭವಿಷ್ಯವನ್ನು ವ್ಯಾಖ್ಯಾನಿಸಲಾಗದಿದ್ದರೂ, ಕೆಲವು ವ್ಯಕ್ತಿಗಳು ಮರಣೋತ್ತರ ಜೀವನವನ್ನು ನೋಡಿದ್ದೇವೆಂದು ಹೇಳಿಕೊಳ್ಳುತ್ತಾರೆ ಮತ್ತು ಸ್ವರ್ಗ ಅಥವಾ ನರಕ ಎಂದು ಅವರು ಏನು ಭಾವಿಸುತ್ತಾರೋ ಅದನ್ನು ವಿವರಿಸುತ್ತಾರೆ. ಕೆಲವರು ಈ ಹೇಳಿಕೆಗಳನ್ನು ಕೆಲವರು ನಂಬಿದರೆ ಮತ್ತಷ್ಟು ಮಂದಿ ಸಂಶಯ ವ್ಯಕ್ತಪಡಿಸುತ್ತಾರೆ.

ನಾಲ್ಕು ಬಾರಿ ಸಾವಿನ ಸಮೀಪಕ್ಕೆ ಹೋಗಿ ಬಂದ ಶರೋನ್ ಮಿಲಿಮನ್ ಎಂಬ ಮಹಿಳೆ ಇದೇ ರೀತಿ ತಮಗಾದ ಅನುಭವಗಳನ್ನು ಹಂಚಿಕೊಂಡಿದ್ದಾರೆ.

62 ವರ್ಷದ ಈ ಮಹಿಳೆ, 13 ವರ್ಷ ವಯಸ್ಸಿನಲ್ಲಿದ್ದಾಗ ಮೊದಲ ಬಾರಿಗೆ ಈ ಅನುಭವ ಪಡೆದುಕೊಂಡಿದ್ದರಂತೆ. ಆಕೆ ತನ್ನ ತಾಯಿಯೊಂದಿಗೆ ಈಜುತ್ತಿದ್ದಾಗ ಇದ್ದಕ್ಕಿದ್ದಂತೆ ಮುಳುಗಲು ಪ್ರಾರಂಭಿಸಿದ್ದನ್ನು ಅವರು ನೆನಪಿಸಿಕೊಂಡಿದ್ದಾರೆ. ಈ ಕಷ್ಟದ ಸಮಯದಲ್ಲಿ, ಅವರ ಆತ್ಮ ಮೇಲಕ್ಕೆ ಏಳುತ್ತಿರುವುದನ್ನು ಮತ್ತು ದೇಹವು ಕೆಳಗೆ ಮುಳುಗುತ್ತಿರುವುದನ್ನು ಅನುಭವಿಸಿರುವುದಾಗಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಭಯ ಅಥವಾ ನೋವನ್ನು ಅನುಭವಿಸಲಿಲ್ಲ ಎಂದಿದ್ದು, ಬಳಿಕ ಜೀವ ರಕ್ಷಕರು ಅವರನ್ನು ರಕ್ಷಿಸಿ ಸಿಪಿಆರ್ ಪಡೆದ ನಂತರ ಜೀವ ಪಡೆದುಕೊಂಡರಂತೆ.

ನಂತರದ ಘಟನೆ ಮಿಲಿಮನ್ 43 ವರ್ಷ ವಯಸ್ಸಿನಲ್ಲಿದ್ದಾಗ ಸಂಭವಿಸಿದ್ದು, ಮಿಂಚು ಹೊಡೆದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು, ಅಲ್ಲಿ ಆಕೆ ಮತ್ತೆ ತನ್ನ ಆತ್ಮವು ಸ್ವರ್ಗಕ್ಕೆ ಏರುವುದನ್ನು ಮತ್ತು ದೇಹವು ಭೂಮಿಯ ಮೇಲೆ ಇರುವುದನ್ನು ಕಂಡುಕೊಂಡಿದ್ದು, ಪ್ರಜ್ಞೆ ಮರಳಿ ಪಡೆದ ನಂತರ ದಿಗ್ಭ್ರಮೆಗೊಂಡಿದ್ದಾರೆ.

ಮಿಲಿಮನ್ ತನ್ನ “ದೇಹವನ್ನು ತೊರೆದ ಆತ್ಮ” ದ ಮೂರನೇ ನಿದರ್ಶನವು ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಮತ್ತು ನಾಲ್ಕನೆಯದು ಔಷಧಿ ದೋಷದಿಂದಾಗಿ ಎಂದು ವಿವರಿಸುತ್ತಾರೆ.

ಶರೋನ್ ಮಿಲಿಮನ್ ಈ ಘಟನೆಗಳಲ್ಲಿ ತನ್ನ ವಿವಿಧ ಅನುಭವಗಳನ್ನು ವಿವರಿಸಿದ್ದು, ತನ್ನನ್ನು ಸಮೀಪಿಸುತ್ತಿದ್ದ ಬೆಳಕನ್ನು ನೆನಪಿಸಿಕೊಳ್ಳುತ್ತಾರೆ, ಅದು ಹತ್ತಿರವಾಗುತ್ತಿದ್ದಂತೆ ದೊಡ್ಡದಾಗುತ್ತಾ, ಅಂತಿಮವಾಗಿ ತನ್ನನ್ನು ಸುತ್ತುವರೆದು ಸ್ವರ್ಗಕ್ಕೆ ಕರೆದೊಯ್ಯಿತು.

ಅಲ್ಲಿ ಗುಲಾಬಿ ಮತ್ತು ಚಿನ್ನದ ಮೋಡಗಳನ್ನು ಮತ್ತು ಅಪರಿಚಿತ ಬರಹ ಹೊಂದಿರುವ ಚಿನ್ನದ ಪುಸ್ತಕ ನೋಡಿದ್ದಾಗಿ ಉಲ್ಲೇಖಿಸಿದ್ದಾರೆ. ಮಿಲಿಮನ್ ತಾನು ಹಲವಾರು ಸಂದರ್ಭಗಳಲ್ಲಿ ಯೇಸುವನ್ನು ನೋಡಿದೆ ಎಂದಿದ್ದು, ಈ ಮರಣೋತ್ತರ ಅನುಭವಗಳಲ್ಲಿ, ಅನೇಕ ಮಾರ್ಗದರ್ಶಕರು ಇದ್ದರು ಮತ್ತು ತನಗೆ ಆಹ್ಲಾದಕರವಾದ ಆಹಾರವನ್ನು ನೀಡಲಾಯಿತು ಎಂದು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries