ಬದಿಯಡ್ಕ: ಮನೆಯಲ್ಲೇ ಸ್ವ ಉದ್ಯೋಗದ ಮೂಲಕ ಬದುಕನ್ನು ಕಟ್ಟಿಕೊಂಡ ವನಜಾ ಕಾರ್ಯಾಡು ಅವರನ್ನು ರೋಟರಿ ಬದಿಯಡ್ಕ ವತಿಯಿಂದ ಸನ್ಮಾನಿಸಲಾಯಿತು.
ಅಧ್ಯಕ್ಷ ಕೇಶವ ಪಾಟಾಳಿ, ಗುರುಪ್ರಸಾದ ಶೆಣೈ, ಬಿ.ಗಣೇಶ್ ಪೈ, ಜಗನ್ನಾಥ ರೈ ಪಾಲ್ಗೊಂಡಿದ್ದರು. ಕಾರ್ಯದರ್ಶಿ ರಮೇಶ್ ಆಳ್ವ ಕಡಾರು ಸ್ವಾಗತಿಸಿ, ರಾಘವೇಂದ್ರ ಅಮ್ಮಣ್ಣಾಯ ವಂದಿಸಿದರು. ತುಪ್ಪ ತಯಾರಿ, ವಿವಿಧ ಬಗೆಯ ಉಪ್ಪಿನಕಾಯಿ, ಸಾಬೂನು, ಔಷಧೀಯ ಎಣ್ಣೆಗಳು, ತಿಂಡಿಗಳನ್ನು ಮನೆಯಲ್ಲೇ ತಯಾರಿಸುತ್ತಿರುವ ವನಜಾ ಕಾರ್ಯಾಡು ಅವರು ಕುಟುಂಬಶ್ರೀ ಘಟಕದಲ್ಲಿ ಸದಸ್ಯರಾಗಿಯೂ ಕಾರ್ಯನಿರ್ವಹಿಸುತ್ತಾರೆ. ಇತ್ತೀಚೆಗೆ ಕುಟುಂಬಶ್ರೀ ಜಿಲ್ಲಾ ಮಿಶನ್ ವತಿಯಿಂದ ಮಾದರಿ ಉದ್ಯಮಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.

.jpg)
