ಮುಳ್ಳೇರಿಯ: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ ಬ್ರಹ್ಮಕಲಶೋತ್ಸವದ ಅಮ್ಮಂಗೋಡು ಗೋಳಿಯಡ್ಕ ಪ್ರಾದೇಶಿಕ ಸಮಿತಿಯ ವಿಸ್ತರೀಕರಣ ಸಭೆ ಅಮ್ಮಂಗೋಡು ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಭಾನುವಾರ ಜರಗಿತು.
ಸದಾಶಿವ ಭಟ್ ಮುಂಡಪ್ಪಳ್ಳ ಅಧ್ಯಕ್ಷತೆ ವಹಿಸಿ ದಿಕ್ಸೂಚಿ ಮಾತುಗಳನ್ನಾಡಿದರು. ಗೋವಿಂದ ಬಳ್ಳಮೂಲೆ ಸಮಿತಿಯ ಮುಂದಿನ ಕಾರ್ಯಯೋಜನೆ, ಮನೆ-ಮನೆ ಅಭಿಯಾನ, ಕರಸೇವೆ, ಸ್ವಯಂಸೇವಕರ ಕಾರ್ಯವಿಧಾನ , ಹೊರೆಕಾಣಿಕೆ ಮೊದಲಾದ ವಿಷಯಗಳ ಬಗ್ಗೆ ಮಾಹಿತಿಗಳನ್ನಿತ್ತರು. ಪ್ರಕಾಶ ಅಮ್ಮಂಗೋಡು ಪ್ರಾಸ್ತಾವಿಕ ಮಾತುಗಳನ್ನಾಡಿ ಸಂಯೋಜಿಸಿದರು. ಕಾರ್ಯದರ್ಶಿ ಪುರುಷೋತ್ತಮ ಗೋಳಿಯಡ್ಕ ಸ್ವಾಗತಿಸಿ, ಪ್ರಿಯ ಗೋಳಿಯಡ್ಕ ವಂದಿಸಿದರು.

.jpg)
.jpg)
