ಮಧೂರು: ಗಣರಾಜ್ಯೋತ್ಸವ ಆಚರಣೆಯ ಶುಭದಿನದಂದು ಲೀಲಾವತಿ ಬೈಪಾಡಿತ್ತಾಯರು ಹುಟ್ಟಿ ಬೆಳೆದ ಮಧೂರು ಪಡುಕಕ್ಕೇಪ್ಪಾಡಿ ಮನೆಯಲ್ಲಿ ಸಂಸ್ಮರಣಾ ಕಾರ್ಯಕ್ರಮ ನಡೆಯಿತು. ಅವರ ಜೀವನದ ಸವಿನೆನಪುಗಳನ್ನು ನೆನೆಪಿಸಿ, ಆತ್ಮಕ್ಕೆ ಶಾಂತಿ ಬಯಸಿ ಕುಟುಂಬದ ಹಿರಿಯರು, ಹಿರಿಯ ಯಕ್ಷಗಾನ ಕಲಾವಿದರೂ, ಪ್ರಸಂಗಕರ್ತರಾದ ಮಧೂರು ವೆಂಕಟಕೃಷ್ಣರು ನೆನಪಿನ ನುಡಿನಮನ ಸಲ್ಲಿಸಿದರು.
ಹಿರಿಯ ಕಲಾವಿದ ಡಾ.ಸತೀಶ್ ಪುಣಿಚಿತ್ತಾಯ ಪೆರ್ಲರ ನಿರ್ದೇಶಾನುಸಾರ ನಡೆದ ಈ ಸಭೆಯಲ್ಲಿ, ಉಳಿಯ ಮಯೂರ ಆಸ್ರ,, ಕಕ್ಕೇಪ್ಪಾಡಿ ವಿಷ್ಣು ಭಟ್,ಬಲರಾಮ ಭಟ್ ಹಾಗೂ ಹಿತೈಷಿಗಳು, ಬಂಧುಗಳೂ ಭಾಗವಹಿಸಿದ್ದರು. ಈ ಸಂದರ್ಭ ಶ್ರೀ ಧನ್ವಂತರಿ ಯಕ್ಷಗಾನ ಕಲಾಸಂಘ ಉಳಿಯ ಇದರ ವಾರದ ಯಕ್ಷಗಾನ ಕೂಟಕ್ಕೆ ಧ್ವನಿವರ್ಧಕ ಹಾಗೂ ಹಿಂದಿನ ಪರದೆಯನ್ನು ನೀಡಲಾಯಿತು. ಬ್ರಹ್ಮಶ್ರೀ ಉಳಿಯುತ್ತಾಯ ವಿಷ್ಣು ಆಸ್ರ ಇವರು ಪಾಲ್ಗೊಂಡು,ಆಶೀರ್ವದಿಸಿದರು. ಬಳಿಕ ನರಕಾಸುರ ವಧೆ ಹಾಗೂ ಗರುಡ ಗರ್ವಭಂಗ ತಾಳಮದ್ದಳೆ ಕೂಟ ನಡೆಯಿತು. ಡಾ.ಧÀನಂಜಯ .ಪಿ.ಕೆ. ಸ್ವಾಗತಿಸಿ, ವಂದಿಸಿದರು.




.jpg)
