ಕುಂಬಳೆ: ಇತಿಹಾಸ ಪ್ರಸಿದ್ಧ ಕಂಬಾರು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಕಾರ್ಯ ನಡೆದು ಅಷ್ಟಬಂಧ ಬ್ರಹ್ಮ ಕುಂಭಾಭಿಷೇಕ ಹಾಗೂ ಜಟಾಧಾರಿ ಪರಿವಾರ ಸಾನಿಧ್ಯಗಳ ಪುನಃ ಪ್ರತಿಷ್ಠೆ ಕಾರ್ಯಕ್ರಮಗಳು ಮಂಗಳವಾರದಿಂದ ಆರಂಭಗೊಂಡಿದ್ದು, ಕಾರ್ಯಕ್ರಮದ ಅಂಗವಾಗಿ ಗುರುವಾರ ಬೆಳಿಗ್ಗೆ 7 ರಿಂದ ಗಣಪತಿಹೋಮ, ಅಂಕುರಪೂಜೆ, ಚೋರಶಾಂತಿ, ಅದ್ಭುತಶಾಂತಿ, ಸ್ವಶಾಂತಿ, ನಾಶಾಂತಿ ಹೋಮಗಳು, ಹೋಮಕಲಶಾಭಿಷೇಕ, ಮಧ್ಯಾಹ್ನ 12.30ಕ್ಕೆ ಮಧ್ಯಾಹ್ನ ಪೂಜೆ, ಅನ್ನಸಂತರ್ಪಣೆ ನಡೆಯಿತು. ರಾತ್ರಿ 7 ರಿಂದ ಅಂಕುರಪೂಜೆ, ದುರ್ಗಾನಮಸ್ಕಾರ ಪೂಜೆ, ರಾತ್ರಿ ಪೂಜೆ ನಡೆಯಿತು. ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 10 ರಿಂದ 12ರ ವರೆಗೆ ರಾಗಮಾಲಿಕಾ ನೆಲ್ಲಿಕಟ್ಟೆ ತಂಡದವರಿಂದ ಭಕ್ತಿ ಸ್ವರ-ಸಿಂಚನ, ರಾತ್ರಿ 7 ರಿಂದ ರಾಮಕೃಷ್ಣ ಕಾಟುಕುಕ್ಕೆ ತಂಡದವರಿಂದ ಭಕ್ತಿ ರಸಮಂಜರಿ ನಡೆಯಿತು.
ಇಂದಿನ ಕಾರ್ಯಕ್ರಮ:
ಬೆಳಿಗ್ಗೆ 5 ರಿಂದ ಗಣಪತಿಹೋಮ, ಅಂಕುರಪೂಜೆ, 6.58 ರಿಂದ 7.47ರ ಮಕರ ಲಗ್ನದಲ್ಲಿ ಜಟಾಧಾರಿ ಹಾಗೂ ಪರಿವಾರ ಸಾನ್ನಿಧ್ಯಗಳ ಪುನಃಪ್ರತಿಷ್ಠೆ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಮಧ್ಯಾಹ್ನ ಪೂಜೆ, ಅನ್ನಸಂತರ್ಪಣೆ, ರಾತ್ರಿ 7 ರಿಂದ ಅಂಕುರಪೂಜೆ, ಮಂಟಪ ಸಂಸ್ಕಾರ, ರಾತ್ರಿಪೂಜೆ ನಡೆಯಲಿದೆ. ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 9.30ರಿಂದ 12.30ರ ವರೆಗೆ ಯಕ್ಷ-ಗಾನ ವೈಭವ ನಡೆಯಲಿದೆ. ಸಂಜೆ 3.30ಕ್ಕೆ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ಹಾಗೂ ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿಗಳ ಆಗಮನ, 4 ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುವರು. ಮಲಬಾರ್ ದೇವಸ್ವಂ ಬೋರ್ಡಿನ ಸಹಾಯಕ ಕಮಿಷನರ್ ಪ್ರದೀಪ್ ಕುಮಾರ್ ಕೆ.ಪಿ.ಅಧ್ಯಕ್ಷತೆ ವಹಿಸುವರು. ಉಚ್ಚಿಲತ್ತಾಯ ಪದ್ಮನಾಭ ತಂತ್ರಿ, ಕೃಷ್ಣಪ್ರಸಾದ ಮುನಿಯಂಗಳ, ವಳಕ್ಕುಂಜ ವೆಂಕಟರಮಣ ಭಟ್, ರಾಮಚಂದ್ರ ಶಾಸ್ತ್ರಿ, ಕೆ.ಕೆ.ಶೆಟ್ಟಿ ಮುಖ್ಯ ಅತಿಥಿಗಳಾಗಿರುವರು. ಬಾಡೂರು ಕೋಳಾರು ರಾಮ್ ಕಿನ್ ಶೆಟ್ಟಿ, ಕುತ್ತಿಕಾರ್ ಕೃಷ್ಣಪ್ರಸಾದ ರೈ, ಕೊಯಂಗಾನ ಕೃಷ್ಣ ಭಟ್, ಬಾಡೂರು ಯಜಮಾನ ಕುಂಞ್ಞಣ್ಣ ಭಂಡಾರಿ, ಇ.ಎಸ್.ಮಹಾಬಲೇಶ್ವರ ಭಟ್, ನೆರಿಯ ಹೆಗಡೆ ಲಕ್ಷ್ಮೀನಾರಾಯಣ ಭಟ್ ಉಪಸ್ಥಿತರಿರುವರು.
ರಾತ್ರಿ 8 ರಿಂದ 10ರ ವರೆಗೆ ಪುತ್ತೂರು ಜಗದೀಶ ಆಚಾರ್ಯ ತಂಡದಿಂದ ಸಂಗೀತ ಗಾನ ಸಂಭ್ರಮ ನಡೆಯಲಿದೆ.