ಮಂಜೇಶ್ವರ : ಕೇರಳ ರಾಜ್ಯದಲ್ಲಿ ಸುದೃಢವಾಗಿದ್ದ ಪಡಿತರ ವ್ಯವಸ್ಥೆಯನ್ನೇ ಬುಡಮೇಲುಗೊಳಿಸಿ ಪಡಿತರ ಅಂಗಡಿಗಳನ್ನು ಶಾಶ್ವತವಾಗಿ ಮುಚ್ಚಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಷಡ್ಯಂತ್ರ ಹೂಡಿದೆ ಎಂದು ಮಾಜಿ ಜಿಲ್ಲಾ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಆರೋಪಿಸಿದ್ದಾರೆ. 'ಒನ್ ನೇಷನ್ ಒನ್ ರೇಷನ್' ಯೋಜನೆಯನ್ನು ಮೋದಿ ಸರ್ಕಾರ ಜಾರಿ ಮಾಡುವ ತರಾತುರಿಯಲ್ಲಿದ್ದು, ಯೋಜನೆ ಪಡಿತರ ವ್ಯವಸ್ಥೆಯನ್ನೇ ಇನ್ನಿಲ್ಲವಾಗಿಸಲಿದೆ. ಕಳೆದೊಂದು ತಿಂಗಳಿನಿಂದ ರೇಷನ್ ಅಂಗಡಿಗಳಲ್ಲಿ ಆಹಾರ ಧಾನ್ಯಗಳು ಲಭಿಸುತ್ತಿಲ್ಲ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ದುರಾಡಳಿತದಿಂದಾಗಿ ಸಾಮಾನ್ಯ ಜನರಿಗೆ ರೇಷನ್ ವಸ್ತುಗಳು ಲಭಿಸದಾಗಿದೆ ಎಂದು ಹರ್ಷಾದ್ ವರ್ಕಾಡಿ ಆರೋಪಿಸಿದರು.
ಮೀಂಜ ಮಂಡಲ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಮೀಯಪದವು ಪಡಿತರ ಅಂಗಡಿ ಮುಂಭಾಗದಲ್ಲಿ ಮಂಗಳವಾರ ಜರಗಿದ ಧರಣಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಂಡಲ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ದಾಮೋದರ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಜಿ. ರಾಮ ಭಟ್, ಶೇಕ್ ಅಬ್ಬಾಸ್, ಉಮ್ಮರ್ ಬೆಜ್ಜ, ಗಂಗಾಧರ ಕೆ., ಸೀತಾರಾಮ ಬೇರಿಕೆ, ಶಾಂತರಾಮ ಶೆಟ್ಟಿ ಬೆಜ್ಜ, ಮೆಟಿಲ್ಡಾ ಡಿಸೋಜಾ, ಖಲೀಲ್ ಸಾಹೇಬ್, ಹೈದರ್, ಮೊಹಮ್ಮದ್ ಮದಂಗಲ್ಲು, ಬಡುವನ್ ಕುಂಞ, ಬೌತಿಸ್ ಡಿಸೋಜ, ಖಾದರ್ ಬ್ಯಾರಿ, ಮೊಹಮ್ಮದ್ ಕೊಳಚೆಪ್ಪು, ಡೆಂಝಿಲ್ ಡಿ'ಸೋಜ, ಫ್ರಾನ್ಸಿಸ್ ಡಿ'ಸೋಜಾ, ಜೋಕಿಂ ಡಿ'ಸೋಜ, ಹಾರಿಸ್ ಮೀಯಪದವು ಮುಂತಾದವರು ಉಪಸ್ಥಿತರಿದ್ದರು.




.jpg)
