ಕುಂಬಳೆ: ಕುಡಾಲು ಮೇರ್ಕಳ ಹಾಗೂ ಬಾಡೂರು ಗ್ರಾಮಕ್ಕೊಳಪಟ್ಟ ಇತಿಹಾಸ ಪ್ರಸಿದ್ಧ ಕಂಬಾರು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಕಾರ್ಯ ನಡೆದು ಅಷ್ಟಬಂಧ ಬ್ರಹ್ಮ ಕುಂಭಾಭಿಷೇಕ ಹಾಗೂ ಜಟಾಧಾರಿ ಪರಿವಾರ ಸಾನಿಧ್ಯಗಳ ಪುನಃ ಪ್ರತಿಷ್ಠೆ ಕಾರ್ಯಕ್ರಮಗಳು ಮಂಗಳವಾರದಿಂದ ಆರಂಭಗೊಂಡಿದೆ.
ಕಾರ್ಯಕ್ರಮದ ಅಂಗವಾಗಿ ಜ 28 ಸಂಜೆ 3.30 ಕ್ಕೆ ಕುಡಾಲು-ಬಾಡೂರು ಎರಡೂ ಗ್ರಾಮಸ್ಥರು ಪೆರ್ಮುದೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ಹಸಿರುವಾಣಿ ಹೊರೆಕಾಣಿಕೆಯೊಂದಿಗೆ ಒಟ್ಟುಸೇರಿ ಸಿಂಗಾರಿ ಮೇಳ, ಹಸಿರು ಕೊಡೆ,ಸಮವಸ್ತ್ರದೊಂದಿಗೆ ಬೃಹತ್ ಶೋಭಯಾತ್ರೆ ಕಂಬಾರು ಕ್ಷೇತ್ರಕ್ಕೆ ಆಗಮಿಸಿತು. ಬಳಿಕ 7 ಕ್ಕೆ ಶ್ರೀಕ್ಷೇತ್ರಕ್ಕೆ ತಂತ್ರಿವರ್ಯ ಬ್ರಹ್ಮಶ್ರೀ ನೀಲೇಶ್ವರ ಕೀಕಾಂಗೋಡು ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ಆಗಮನ, ಪೂರ್ಣ ಕುಂಭ ಸ್ವಾಗತ ಬಳಿಕ ವಿವಿಧ ವೈದಿಕ, ತಾಂತ್ರಿಕ ಕಾರ್ಯಕ್ರಮಗಳು ಆರಂಭಗೊಂಡವು. ಈ ಸಂದರ್ಭದಲ್ಲಿ ರಾತ್ರಿ 8.30 ಕ್ಕೆ ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಮಯೂರಿ ನಾಟ್ಯ ಕಲಾ ಕೇಂದ್ರ ಕೊಪ್ಪ ಇವರ ಪ್ರಾಯೋಜಕತ್ವದಲ್ಲಿ ಭರತನಾಟ್ಯ ಹಾಗೂ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು.
ಇಂದಿನ ಕಾರ್ಯಕ್ರಮ:
ಬೆಳಗ್ಗೆ 7 ಕ್ಕೆ ಗಣಪತಿ ಹೋಮ, ಅಂಕುರಪೂಜೆ, ಬಿಂಬಶುದ್ಧಿ, ಕಲಶಾಭಿಷೇಕ, ಧ್ವಾರ ಪ್ರಾಯಶ್ಚಿತ ಹೋಮಗಳು, ಹೋಮ ಕಲಶಾಭಿಷೇಕ, ಪೂರ್ವಾಹ್ನ 10 ರಿಂದ ರಾಮಚಂದ್ರ ಮಣಿಯಾಣಿ ಕಾಟುಕುಕ್ಕೆ ಅವರಿಂದ ಶಮಂತಕ ಮಣಿ ಹರಿಕಥಾ ಸಂಕೀರ್ತನೆ ಜರಗಲಿದೆ. ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ರಾತ್ರಿ 7 ರಿಂದ ಅಂಕುರ ಪೂಜೆ, ದುರ್ಗಾನಮಸ್ಕಾರ ಪೂಜೆ, ರಾತ್ರಿ ಪೂಜೆ ಜರಗಲಿದೆ. ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ರಾತ್ರಿ 7 ರಿಂದ ಕುಮಾರ ಸ್ವಾಮಿ ನಾಟ್ಯಾಲಯ ಪುತ್ತಿಗೆ ಇದರ ವಿದುಷಿ ಭವ್ಯಶ್ರೀ ಬಾಡೂರು ಇವರ ಶಿಷ್ಯೆಯರಿಂದ ಶ್ರೀದುರ್ಗಾ ಮಹಿಳಾ ಸಂಘ ಬಾಡೂರು ಇವರ ಪ್ರಾಯೋಜಕತ್ವದಲ್ಲಿ ನೃತ್ಯ ವೈಭವ ಪ್ರದರ್ಶನಗೊಳ್ಳಲಿದೆ.





