ಮಧೂರು: ಮಧೂರು ಗ್ರಾಮ ಪಂಚಾಯತಿಯಲ್ಲಿ ನೌಕರರ ಕೊರತೆಯಿಂದ ತೀವ್ರ ಸಮಸ್ಯೆ ಎದುರಾಗುತ್ತಿದ್ದು, ಇದರಿಂದ ಪಂಚಾಯತಿಯ ಅಧ್ಯಕ್ಷ ಸಹಿತ ಎಲ್ಲಾ ಜನಪ್ರತಿನಿಧಿಗಳು ಪಂಚಾಯತಿ ಜೋಯಿಂಟ್ ಡೈರೆಕ್ಟರ್ ಕಚೇರಿ ಮುಂಭಾಗದಲ್ಲಿ ಇತ್ತೀಚೆಗೆ ಧÀರಣಿ ಸತ್ಯಾಗ್ರಹ ನಡೆಸಿದರು. ಬಳಿಕ ಜೋಯಿಂಟ್ ಡೈರೆಕ್ಟರ್ ಜಿ.ಸುಧಾಕರನ್ ಜನಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಾಣುವುದಾಗಿ ಭರವಸೆ ನೀಡಿದರು.
ಗ್ರಾಮ ಪಂಚಾಯತಿಯಲ್ಲಿ ನಾಲ್ಕು ಮಂದಿ ಕ್ಲರ್ಕ್‍ಗಳ ಹುದ್ದೆ ಹಲವು ಕಾಲದಿಂದ ತೆರವು ಬಿದ್ದಿದೆಯಾದರೂ ನೇಮಕಾತಿಗೆ ಕ್ರಮ ಕೈಗೊಂಡಿಲ್ಲ. ನಾಲ್ಕು ತಿಂಗಳ ಹಿಂದೆಯಷ್ಟೇ ನೇಮಕಗೊಂಡ ಕಾರ್ಯದರ್ಶಿ ಇದೀಗ ವರ್ಗಾವಣೆ ಪಡೆದೆ, ತೆರಳಿದ್ದಾರೆ. ಈ ಎಲ್ಲಾ ಕಾರಣಗಳಿಂದ ಪಂಚಾಯತಿಯಲ್ಲಿ ವಿವಿಧ ಯೋಜನೆಗಳ ನಿರ್ವಹಣೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ನೌಕರರನ್ನು ಶೀಘ್ರ ನೇಮಿಸಬೇಕೆಂದು ಒತ್ತಾಯಿಸಿ ಜನಪ್ರತಿನಿಧಿಗಳು ಧರಣಿ ನಡೆಸಿದರು.
ಗ್ರಾಮ ಪಂಚಾಯತಿ ಕಾರ್ಯದರ್ಶಿ ಈ ಮಾರ್ಚ್ ವರಗೆ ಇಲ್ಲಿಯೇ ಕರ್ತವ್ಯದಲ್ಲಿರುವಂತೆ ತಿಳಿಸಲಾಗುವುದು. ಖಾಲಿ ಬಿದ್ದಿರುವ ಹುದ್ದೆಗಳಿಗೆ ಶೀಘ್ರ ನೇಮಕಾತಿ ನಡೆಸುವುದಾಗಿ ಜೋಯಿಂಟ್ ಡೈರೆಕ್ಟರ್ ಭರವಸೆ ನೀಡಿದ್ದಾರೆ. ಪಂಚಾಯತಿ ಅಧ್ಯಕ್ಷ ಕೆ.ಗೋಪಾಲಕೃಷ್ಣ , ಸ್ಥಾಯೀ ಸಮಿತಿ ಅಧ್ಯಕ್ಷರಾದ ಯಶೋದ ನಾಯ್ಕ್, ಉಮೇಶ್ ಗಟ್ಟಿ, ಬ್ಲಾಕ್ ಪಂಚಾಯತಿ ಸದಸ್ಯರಾದ ಸುಕುಮಾರ ಕುದ್ರೆಪ್ಪಾಡಿ, ಜಮೀಲ ಅಹಮ್ಮದ್ ಹಾಗು ಪಂಚಾಯತಿಯ ಎಲ್ಲಾ ಜನಪ್ರತಿನಿಧಿಗಳು ಧರಣಿಯಲ್ಲಿ ಭಾಗವಹಿಸಿದ್ದರು.




.jpg)
