ಕಾಸರಗೋಡು: ಜಿಲ್ಲೆಯ ವಿವಿಧೆಡೆ ಅಬಕಾರಿ ದಳ ಸಿಬ್ಬಂದಿ ದಾಳಿ ನಡೆಸಿ, ಮದ್ಯ, ಗಾಂಜಾ ಹಾಗೂ ಹುಳಿರಸ ವಶಪಡಿಸಿಕೊಂಡಿದ್ದಾರೆ.ಅಡೂರು ನೇರ್ಲಕಯದ ಮನೆಯೊಂದಕ್ಕೆ ಬದಿಯಡ್ಕ ರೇಂಜ್ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಮದ್ಯತಯಾರಿಗಾಗಿ ಸಂಗ್ರಹಿಸಿಡಲಾಗಿದ್ದ 140ಲೀ. ಹುಳಿರಸ ವಶಪಡಿಸಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯ ನಿವಾಸಿ ವೆಂಕಪ್ಪ ನಾಯ್ಕ್ ಎಂಬಾತನನ್ನು ಬಂಧಿಸಿದ್ದಾರೆ.
ಚೆಂಗಳ ಮನ್ನಿಪ್ಪಡಿಯಲ್ಲಿ ಕಾಸರಗೋಡು ಅಬಕಾರಿ ದಳ ಸಇಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಗಾಂಜಾ ಕೈವಶವಿರಿಸಿಕೊಮಡಿದ್ದ ಪನ್ನಿಪ್ಪಾರ ನಿವಾಸಿ ಮಹಮ್ಮದ್ ಲುಬೈಕರ್ ಎಂಬಾತನನ್ನು ಬಂಧಿಸಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಕಾಸರಗೋಡು ನುಳ್ಳಿಪ್ಪಾಡಿಯಲ್ಲಿ 12.96ಲೀ. ಕರ್ನಾಟಕ ನಿರ್ಮಿತ ವಿದೇಶಿ ಮದ್ಯ ವಶಪಡಿಸಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿ ಹರಿಪ್ರಸಾದ್ ಎಂಬಾತನನ್ನು ಬಂಧಿಸಿದ್ದಾರೆ.




