ಕಾಸರಗೋಡು : ವಿದ್ಯಾನಗರ ಮುನ್ಸಿಪಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಸಾರಿಗೆ ಸಚಿವ ಕೆ.ಬಿ.ಗಣೇಶ್ ಕುಮಾರ್ ಗೌರವವಂದನೆ ಸ್ವೀಕರಿಸಲಿದ್ದಾರೆ. ವರ್ಣರಂಜಿತ ಪಥಸಂಚಲನದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪೆÇಲೀಸ್, ಸ್ಥಳೀಯ ಪೆÇಲೀಸ್, ಮಹಿಳಾ ಪೆÇಲೀಸ್, ಅಬಕಾರಿ, ಪಾಣತ್ತೂರು ಸರ್ಕಾರಿ. ಕಲ್ಯಾಣ ಪ್ರೌಢಶಾಲೆ, ಬಾಳತ್ತೋಡ್ ಸರಕಾರಿ ಹೈಯರ್ ಸೆಕೆಂಡರಿ ಶಾಲೆ, ಕೋಟೋತ್ ಡಾ. ಅಂಬೇಡ್ಕರ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿ ಪೆÇಲೀಸ್, ಕೊಡಕ್ಕಾಡ್ ಕೆಲಪಾಜಿ ಮೆಮೋರಿಯಲ್ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆ, ಕಾಸರಗೋಡು ಸರ್ಕಾರಿ ಕಾಲೇಜು, ಕಾಞಂಗಾಡ್ ನೆಹರು ಕಲಾ ಮತ್ತು ವಿಜ್ಞಾನ ಕಾಲೇಜು ಹಿರಿಯ ವಿಭಾಗ ಸೇರಿದಂತೆ 20 ತುಕಡಿಗಳು ಪಥಸಂಚಲನದಲ್ಲಿ ಪಾಲ್ಗೊಳ್ಳಲಿದೆ.
ಜನವರಿ 22 ಮತ್ತು 23 ರಂದು ಮಧ್ಯಾಹ್ನ 2 ಗಂಟೆಗೆ ಮತ್ತು 24 ರಂದು ಬೆಳಿಗ್ಗೆ 8 ಗಂಟೆಗೆ ಕಾಸರಗೋಡು ಮುನ್ಸಿಪಲ್ ಸ್ಟೇಡಿಯಂನಲ್ಲಿ ಅಬ್ಯಾಸ ಪಥಸಂಚಲನ ನಡೆಯಲಿದೆ. ಪೆರೇಡ್ ರಿಹರ್ಸಲನ್ನು ಎಆರ್ ಕ್ಯಾಂಪ್ ಸಹಾಯಕ ಕಮಾಂಡೆಂಟ್ ಮುನ್ನಡೆಸಲಿದ್ದಾರೆ. ಗಣರಾಜ್ಯೋತ್ಸವದಲ್ಲಿ ಸ್ವಾತಂತ್ರ್ಯ ಹೋರಾಟಗಾರರು, ಜನಪ್ರತಿನಿಧಿಗಳು, ಸರ್ಕಾರಿ ನೌಕರರು, ಸಾರ್ವಜನಿಕರು, ವಿದ್ಯಾರ್ಥಿಗಳು ಭಾಗವಹಿಸುವಂತೆ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ನಿರ್ದೇಶ ನೀಡಿದ್ದಾರೆ.





