ಕಾಸರಗೋಡು: ಇಂಧನ ನಿರ್ವಹಣಾ ಕೇಂದ್ರದ ಆಶ್ರಯದಲ್ಲಿ 2025 ಫೆಬ್ರವರಿ 7, 8 ಮತ್ತು 9 ರಂದು ತಿರುವನಂತಪುರದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಇಂಧನ ಉತ್ಸವದ ಅಂಗವಾಗಿ ಮೆಗಾ ರಸಪ್ರಶ್ನೆ ಸ್ಪರ್ಧೆ ನಡೆಸಲಾಗುವುದು.
ವಯಸ್ಸಿನ ಮಿತಿ ಇಲ್ಲದೆ ಎಲ್ಲಾ ಹರೆಯದವರಿಗೆ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ಅಥವಾ www.quiz.iefk.in ಎಂಬ ಪೆÇೀರ್ಟಲ್ ಮೂಲಕ ಮೆಗಾ ರಸಪ್ರಶ್ನೆಯಲ್ಲಿ ಭಾಗವಹಿಸಲು ಮುಕ್ತವಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.
ಮೊದಲ ಸುತ್ತಿನ ಸ್ಪರ್ಧೆಯು ಫೆಬ್ರವರಿ 2 ರಂದು ಮಧ್ಯಾಹ್ನ 3 ಗಂಟೆಗೆ ಆನ್‍ಲೈನ್‍ನಲ್ಲಿ ನಡೆಯಲಿದೆ. ಮೊದಲ ಸುತ್ತಿನ ಸ್ಪರ್ಧೆಯ ವಿಜೇತರು ಫೆಬ್ರವರಿ 9 ರಂದು ಐಇಎಫ್‍ಕೆ ಯಲ್ಲಿ ನಡೆಯಲಿರುವ ಗ್ರ್ಯಾಂಡ್ ಫಿನಾಲೆಗೆ ಅರ್ಹತೆಯನ್ನು ಪಡೆಯಲಿದ್ದಾರೆ.
ವಿಜೇತರಿಗೆ ಪ್ರಮಾಣಪತ್ರ ಮತ್ತು ಫಲಕದ ಜೊತೆಗೆ ಪ್ರಥಮ ಬಹುಮಾನವಾಗಿ 1 ಲಕ್ಷ ರೂ., ದ್ವಿತೀಯ ಬಹುಮಾನವಾಗಿ 50,000 ರೂ. ಮತ್ತು ತೃತೀಯ ಬಹುಮಾನವಾಗಿ 25,000 ರೂ. ನೀಡಲಾಗುವುದು. ಅಲ್ಲದೆ ಇತರ ವಿಜೇತರಿಗೆ ಪೆÇ್ರೀತ್ಸಾಹಕ ಬಹುಮಾನಗಳನ್ನು ನೀಡಲಾಗುತ್ತದೆ. ನೋಂದಣಿಗೆ 2025 ಜ. 26 ಅಂತಿಮ ದಿನವಾಗಿದ್ದು, ಈ ಬಗ್ಗೆ .ಹೆಚ್ಚಿನ ಮಾಹಿತಿಗಾಗಿ ದೂರವಾಣಿ(0471-2594922)ಸಂಖ್ಯೆ ಅತವ ಇಮೇಲ್- emck@keralaenergy.gov.in ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.




