ಕಾಸರಗೋಡು: 60 ವರ್ಷ ಪೂರೈಸಿದ ಕಾಸರಗೋಡು ಲಯನ್ಸ್ ಕ್ಲಬ್‍ನ ಸಂಸ್ಥಾಪನಾ ದಿನಾಚರಣೆ ಹಾಗೂ ಕುಟುಂಬ ಸಮ್ಮಿಲನ ಕಾರ್ಯಕ್ರಮ ಕಸರಗೋಡಿನಲ್ಲಿ ಜರುಗಿತು. ಲಯನ್ಸ್ ಜಿಲ್ಲಾ ಗವರ್ನರ್ ಕೆ.ವಿ.ರಾಮಚಂದ್ರನ್ ಸಮಾರಂಭ ಉದ್ಘಾಟಿಸಿದರು. ಕ್ಲಬ್ ಅಧ್ಯಕ್ಷ ರಾಜೇಂದ್ರ ಕುಂಟಾರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ವಕೀಲ ಕರುಣಾಕರನ್ ವರದಿ ಮಂಡಿಸಿದರು. ಜಿಲ್ಲಾ ಕ್ಯಾಬಿನೆಟ್ ಕಾರ್ಯದರ್ಶಿಗಳಾದ ಪಿ.ಗಂಗಾಧರನ್, ಶಾಜಿ ಥಾಮಸ್, ಜಿಲ್ಲಾ ಜಿ.ಎಲ್.ಟಿ. ಸಹ-ಸಂಯೋಜಕ ವಿ.ವೇಣುಗೋಪಾಲನ್, ಜಿಲ್ಲಾ ಕಾರ್ಯದರ್ಶಿ ಕೆ.ಸುಕುಮಾರನ್ ನಾಯರ್, ವಲಯಾಧ್ಯಕ್ಷ ಪಿ.ವಿ. ಮಧುಸೂದನನ್ ಹಾಗೂ ವಲಯ ಅಧ್ಯಕ್ಷ ಪೆÇ್ರ.ವಿ.ಗೋಪಿನಾಥನ್ ಉಪಸ್ಥಿತರಿದ್ದರು. ಕೆ.ವಿಜಯನ್ ಸ್ವಾಗತಿಸಿದರು. ಎ. ದಾಮೋದರನ್ ವಂದಿಸಿದರು.




