ಕಾಸರಗೋಡು: ಉಳ್ಳಾಲ ಕೋಟೆಕಾರು ಸಹಕಾರಿ ಸಂಘದಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯನ್ನು ಕಾಸರಗೋಡಿಗೂ ವಿಸ್ತರಿಸಲಾಗಿದ್ದು, ಕಾಸರಗೋಡಿನ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ದರೋಡೆ ನಡೆಸಿದ ತಂಡ ಸಂಚರಿಸಿದ ಕಾರು ತಲಪ್ಪಾಡಿ ಮೂಲಕ ಕಾಸರಗೋಡು ಜಿಲ್ಲೆ ಪ್ರವೇಶಿಸಿರುವುದು ಸಿಸಿ ಕ್ಯಾಮರಾ ದೃಶ್ಯಾವಳಿಯಿಂದ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಧಾನ ರಸ್ತೆಗಳಲ್ಲಿನ ಸಿಸಿ ಕ್ಯಾಮರಾ ದ್ರಸ್ಯಾವಳಿಗಳನ್ನು ತಪಾಸಣೆ ನಡೆಸಿದ್ದಾರೆ. ಜ. 17ರಂದು ದರೋಡೆ ನಡೆದಿದ್ದು, ನಂತರ ತಂಡ ಸಂಚರಿಸಿದ್ದೆನ್ನಲಾದ ಕಾರು ಮಧ್ಯಾಹ್ನ 1.30ರ ವೇಳೆಗೆ ತಲಪ್ಪಾಡಿ ತಪಾಸಣಾ ಕೇಂದ್ರ ದಾಟಿ ಮುಂದಕ್ಕೆ ಸಂಚರಿಸಿರುವ ಬಗ್ಗೆ ದೃಶ್ಯ ಪತ್ತೆಯಾಗಿದೆ. ಕಾರು ಕಾಸರಗೊಡು ಭಾಗಕ್ಕೆ ಸಂಚರಿಸದೆ, ಹೊಸಂಗಡಿ ಹಾದಿಯಾಗಿ ಮೀಯಪದವು, ಆನೆಕಲ್ಲು ಮೂಲಕ ಮತ್ತೆ ಕರ್ನಾಟಕಕ್ಕೆ ಸಂಚರಿಸಿರುವ ಸಾಧ್ಯತೆಯಿದೆ. ಇವರು ಹಳೇ ಫಿಯೆಟ್ ಕಾರಿನಲ್ಲಿ ಸಂಚರಿಸಿದ್ದು, ಈ ಕಾರಿಗೆ ಅಳವಡಿಸಿದ್ದ ನಂಬರ್ ಪ್ಲೇಟ್ ನಕಲಿಯಾಗಿರಬೇಕೆಂದು ಸಂಶಯಿಸಲಾಗಿದೆ.




.webp)
