ಮಹಾಕುಂಭ ನಗರ: ಮಹಾಕುಂಭಮೇಳ ಆರಂಭಗೊಳ್ಳುವ ಮೊದಲು ಸೆರೆಹಿಡಿಯಲಾಗಿರುವ ಪ್ರಯಾಗರಾಜ್‌ನ ತ್ರಿವೇಣಿ ಸಂಗಮದ ಉಪಗ್ರಹ ಚಿತ್ರಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಬುಧವಾರ ಬಿಡುಗಡೆ ಮಾಡಿದೆ.
2023ರ ಸೆ.15 ಹಾಗೂ 2024ರ ಡಿ.29ರಂದು ಉಪಗ್ರಹ ಸೆರೆಹಿಡಿದಿರುವ ಎರಡು ಚಿತ್ರಗಳನ್ನು ಇಸ್ರೊ ಬಿಡುಗಡೆ ಮಾಡಿದೆ.
ನಗರದಲ್ಲಿನ ಸೇತುವೆಗಳು, ರಸ್ತೆಗಳು, 12 ಎಕರೆ ಜಾಗದಲ್ಲಿರುವ ಭಾರತ ಆಕಾರದ 'ಶಿವಾಲಯ ಉದ್ಯಾನ' ನಿರ್ಮಾಣ ಹಾಗೂ ಮಹಾಕುಂಭಮೇಳದ ತಯಾರಿಗಾಗಿ ನಡೆಸಿರುವ ಮೂಲಸೌಕರ್ಯಗಳು ಸೇರಿದಂತೆ ನಗರದ ಒಟ್ಟಾರೆ ಚಿತ್ರಣವನ್ನು ಇಸ್ರೊದ ಚಿತ್ರಗಳು ಕಟ್ಟಿಕೊಡುತ್ತವೆ.

