ಪೆರ್ಲ : ಎಣ್ಮಕಜೆ ಗ್ರಾಮ ಪಂಚಾಯತಿನ 2023-24 ನೇ ಆರ್ಥಿಕ ವರ್ಷದ ಯೋಜನೆಗಳನ್ವಯ ಸ್ವರ್ಗ ಶಾಲೆಯಲ್ಲಿ ನಿರ್ಮಿಸಿದ ಶೌಚಾಲಯವನ್ನು ಹಸ್ತಾಂತರಿಸಲಾಯಿತು.
ಪಂಚಾಯತು ಅಧ್ಯಕ್ಷರಾದ ಸೋಮಶೇಖರ ಜೆ.ಎಸ್. ವರು ಯೋಜನೆಯನ್ನು ಶಾಲೆಗೆ ಸಮರ್ಪಿಸಿದರು. ಎಣ್ಮಕಜೆ ಗ್ರಾಮ ಪಂಚಾಯತಿ ಸದಸ್ಯರಾದ ರಾಮಚಂದ್ರ ಎಂ ಅಧ್ಯಕ್ಷತೆ ವಹಿಸಿದ್ದರು.
ಎಣ್ಮಕಜೆ ಗ್ರಾಮ ಪಂಚಾಯತಿ ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ಜಯಶ್ರೀ ಎಂ ಕುಲಾಲ್,ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಗೀತಾ ಕುಮಾರಿ,ಪಿ.ಟಿ.ಎ ಅಧ್ಯಕ್ಷರಾದ ಕಾರ್ತಿಕ್ ಶಾಸ್ತ್ರಿ ಖಂಡೇರಿ,ಪೆರ್ಲ ಎಫ್ ಎಚ್ ಸಿ ಜೆಎಚ್ಐ ಹರೀಶ್ ಎಂ, ಸಿ ಡಿ ಎಸ್ ಉಪಾಧ್ಯಕ್ಷೆ ಶಶಿಕಲಾ ಮುಂತಾದವರು ಉಪಸ್ಥಿತರಿದ್ದರು.

.jpg)
.jpg)
