HEALTH TIPS

ಶೇಣಿ ಶಾಲಾ ಎನ್ನೆಸ್ಸಸ್ಸ್ ಘಟಕ ಚಂಬ್ರಕಾನದಲ್ಲಿ ನಿರ್ಮಿಸಿದ ಬಸ್ ನಿಲ್ದಾಣ ಲೋಕಾರ್ಪಣೆ

ಪೆರ್ಲ : ರಾಷ್ಟ್ರೀಯ ಸೇವಾ ಯೋಜನೆಯ ಶೇಣಿ ಶ್ರೀ ಶಾರದಾಂಬ ಹೈಯರ್ ಸೆಕೆಂಡರಿ ಶಾಲೆಯ ಘಟಕದ ಕಾರ್ಯಕರ್ತರು  ಎಣ್ಮಕಜೆ ಗ್ರಾಮ ಪಂಚಾಯತಿನ ಬೆದ್ರಂಪಳ್ಳ ವಾರ್ಡಿನ ಚಂಬ್ರಕಾನದಲ್ಲಿ ನಿರ್ಮಿಸಿದ ಬಸ್ ನಿಲ್ದಾಣವನ್ನು ಶುಕ್ರವಾರ ಲೋಕಾರ್ಪಣೆಗೊಳಿಸಲಾಯಿತು.ಈ ಪ್ರದೇಶದ ಜನರು ಗಾಳಿ ಮಳೆ,ಬಿಸಿಲಿಗೆ ರಕ್ಷಣೆಯಿಲ್ಲದೆ ಬಸ್ ಕಾಯುತ್ತಿರುವುದನ್ನು ಮನಗಂಡ ಎನ್ನೆಸ್ಸಸ್ ಕಾರ್ಯಕರ್ತರು ಗುಜರಿ ಸಾಮಾಗ್ರಿಗಳನ್ನು ಸಂಗ್ರಹಿಸಿ ಮಾರುವ ಯೋಜನೆ ಮೂಲಕ ವಿವಿಧ ಧಾನಿಗಳ ನೆರವಿನಿಂದ ಈ ಬಸ್ ನಿಲ್ದಾಣವನ್ನು ಕಳೆದ ಒಂದು ತಿಂಗಳ ಅಂತರದಲ್ಲಿ ಕಾಮಗಾರಿ ಪೂರ್ತಿಗೊಳಿಸಿದ್ದರು. 


ಮಂಜೇಶ್ವರ ಶಾಸಕ ಎಕೆಎಂ ಆಶ್ರಫ್ ಉದ್ಘಾಟಿಸಿದರು.  ಪಂಚಾಯತು ಅಧ್ಯಕ್ಷರಾದ ಸೋಮಶೇಖರ ಜೆ.ಎಸ್. ಅಧ್ಯಕ್ಷತೆವಹಿಸಿದ್ದರು.ಮಂಜೇಶ್ವರ ಬ್ಲೋಕ್ ಸದಸ್ಯ ಅನಿಲ್ ಕುಮಾರ್ ಕೆ.ಪಿ, ಪಂ. ಸದಸ್ಯರಾದ ರಾಧಾಕೃಷ್ಣ ನಾಯಕ್ ಜೆ.ಎಸ್, ರಾಮಚಂದ್ರ ಎಂ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ವಿಲ್ಸನ್ ಡಿಸೋಜ, ಉಪಾಧ್ಯಕ್ಷ ಉಮ್ಮರ್ ಕಂಗಿನಮೂಲೆ, ಯುಪಿ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬುಬ್ಬಕ್ಕರ್ ಪೆರ್ದನೆ,ಎನ್ನೆಸ್ಸಸ್ ನಾಯಕಿ ನಫೀಸಾ ಸುಲೈಮ ಮುಂತಾದವರು ಮಾತನಾಡಿದರು.ಹೈಯರ್ ಸೆಕೆಂಡರಿ ಪ್ರಾಂಶುಪಾಲ ಶಾಸ್ತ ಕುಮಾರ್ ಎ ಸ್ವಾಗತಿಸಿ ಎನ್ನೆಸ್ಸಸ್ ಕಾರ್ಯ ನಿರ್ವಹಣಾಧಿಕಾರಿ ಸಂತೋμï ಕುಮಾರ್ ಕ್ರಾಸ್ತಾ ವಂದಿಸಿದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries