HEALTH TIPS

ಮಲಯಾಳ ಸುದ್ದಿ ವಾಹಿನಿಯ ಮೂವರು ಪತ್ರಕರ್ತರ ವಿರುದ್ಧ ಪೋಕ್ಸೊ ಪ್ರಕರಣ!

ತಿರುವನಂತಪುರ: ಮಲಯಾಳದ ಪ್ರಮುಖ ಸುದ್ದಿವಾಹಿನಿಯೊಂದರ ಹಿರಿಯ ಸಂಪಾದಕ ಮತ್ತು ಇಬ್ಬರು ವರದಿಗಾರರ ಮೇಲೆ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಾಹಿನಿಯ ಮೂವರು ಪತ್ರಕರ್ತರ ವಿರುದ್ಧ ಬುಧವಾರ ಪೋಕ್ಸೊ ಕಾಯ್ದೆಯ ಸೆಕ್ಷನ್‌ 11(ಲೈಂಗಿಕ ಕಿರುಕುಳ) ಮತ್ತು 12(ಲೈಂಗಿಕ ಕಿರಕುಳಕ್ಕೆ ಶಿಕ್ಷೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದಾಗಿದೆ ಎಂದು ಕಂಟೋನ್ಮೆಟ್‌ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಚೇರಿ ವರದಿ ಆಧರಿಸಿ ಪ್ರಕರಣ ದಾಖಲಿಸಲಾಗಿದೆ. ಅಪರಾಧಗಳು ಜಾಮೀನು ನೀಡಬಹುದಾದವು ಎಂದು ಅವರು ತಿಳಿಸಿದ್ದಾರೆ.

ಈ ತಿಂಗಳ ಮೊದಲ ವಾರದಲ್ಲಿ ನಡೆದ ರಾಜ್ಯ ಶಾಲಾದಿನೋತ್ಸವದ ಪ್ರಸಾರದ ಸಂದರ್ಭದಲ್ಲಿ, ವಾಹಿನಿಯ ವರದಿಗಾರರು ಒಬ್ಬ ಸ್ಪರ್ಧಿಯ ಬಗ್ಗೆ ನೀಡಿದ ಕೆಲ ಹೇಳಿಕೆಗಳು ದ್ವಂದ್ವಾರ್ಥದಿಂದ(ಡಬಲ್ ಮೀನಿಂಗ್) ಕೂಡಿದ್ದವು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries