ಮುಳ್ಳೇರಿಯ: ಚಿರತೆ ಸಂಚಾರದ ಭೀತಿಯಲ್ಲಿರುವ ಮುಳ್ಳೇರಿಯ, ಬೋವಿಕ್ಕಾನ ಆಸುಪಾಸಿನ ಜನತೆಗೆ ಅವಳಿ ಚಿರತೆ ಪ್ರತ್ಯಕ್ಷಗೊಳ್ಳುವುದರೊಂದಿಗೆ ಆತಂಕ ಮತ್ತಷ್ಟು ಹೆಚ್ಚಾಗತೊಡಗಿದೆ. ದಿನೇಶನ್ ಕುಟ್ಟಿಯಾನಂ ಎಂಬವರು ಆಟೋರಿಕ್ಷಾದಲ್ಲಿ ಇಬ್ಬರು ಅಯ್ಯಪ್ಪ ವ್ರತಧಾರಿಗಳನ್ನು ಕರೆದೊಯ್ಯುವ ಮಧ್ಯೆ, ಚಿಪ್ಲಿಕಯ ರಸ್ತೆಯಲ್ಲಿ ಎರಡು ಚಿರಿತೆಗಳು ಆಟೋರಿಕ್ಷಾದ ಲೈಟಿಗೆ ಕಂಡುಬಂದಿದ್ದು, ಇದರಲ್ಲಿ ಒಂದು ಕುರುಚಲು ಪೊದೆಯೆಡೆಗೆ ಸಾಗಿ ಮರೆಯಾಗಿದ್ದರೆ, ಇನ್ನೊಂದು ಚಿರತೆ ಅಲ್ಪ ಹೊತ್ತು ರಸ್ತೆಯಲ್ಲೇ ನಿಂತು ಮತ್ತೆ ಸಂಚರಿಸಿರುವುದಾಗಿ ತಿಳಿಸಿದ್ದರು. ಇರಿಯಣ್ಣಿಯಿಂದ ಅನತಿ ದೂರದಲ್ಲಿರುವ ಚಿಪ್ಲಿಕಯದಲ್ಲಿ ಕಂಡುಬಂದಿರುವುದರಿಂದ ಈ ಪ್ರದೇಶದ ಜನರಲ್ಲೂ ಭೀತಿ ಆವರಿಸಿದೆ.


