ಕಾಸರಗೋಡು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಆದೂರು ಹಾಗೂ ನೀಲೇಶ್ವರ ಪೊಲೀಸ್ ಠಾಣೆಯಲ್ಲಿ ಎರಡು ಪೋಕ್ಸೋ ಕೇಸು ದಾಖಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ. ನೀಲೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಹನ್ನೊಂದರ ಹರೆಯದ ಬಾಲಕಿ ನೀಡಿದ ದೂರಿನನ್ವಯ ತನ್ನ ತಾಯಿ ಸಹೋದರ, 30ರ ಹರೆಯದ ವ್ಯಕ್ತಿ ಕಿರುಕುಳ ನೀಡಿರುವ ಬಗ್ಗೆ ಪೊಲೀಸರು ಪೋಕ್ಸೋ ಅನ್ವಯ ಕೇಸು ದಾಖಲಿಸಿಕೊಂಡು ಬಂಧಿಸಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಬೆಳ್ಳೂರು ನೇಜಿಕ್ಕಾರ್ ನಿವಾಸಿ ಕೃಷ್ಣರಾಜ್(40)ಎಂಬಾತನನ್ನು ಪೋಕ್ಸೋ ಅನ್ವಯ ಬಂಧಿಸಲಾಗಿದೆ. ಹನ್ನೊಂದರ ಹರೆಯದ ಬಾಲಕಗೆ ಸಲಿಂಗ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಈತನನ್ನು ಬಂಧಿಸಲಾಗಿದೆ.


