HEALTH TIPS

ಕೇರಳ ರಾಜ್ಯ ಪಿಂಚಣಿದಾರರ ಸಂಘ್(ಕೆ.ಎಸ್.ಪಿ.ಸಂಘ್) ಕಾಸರಗೋಡು ಜಿಲ್ಲಾ ಸಮ್ಮೇಳನ

ಕಾಸರಗೋಡು: ಕೇರಳ ರಾಜ್ಯ ಪಿಂಚಣಿದಾರರ ಸಂಘ್(ಕೆ.ಎಸ್.ಪಿ.ಸಂಘ್) ಕಾಸರಗೋಡು ಜಿಲ್ಲಾ ಸಮ್ಮೇಳನ ಕುಂಜರಕಾನ ಶ್ರೀದುರ್ಗಾ ಪರಮೇಶ್ವರಿ ಸಭಾಂಗಣದಲ್ಲಿ ಜರುಗಿತು. ಸಂಘಟನೆ ರಾಜ್ಯಾಧ್ಯಕ್ಷ ಎಂ.ಕೆ. ಸದಾನಂದನ್ ಸಮಾರಂಭ ಉದ್ಘಾಟಿಸಿದರು. ಸಂಘದ ಜಿಲ್ಲಾಧ್ಯಕ್ಷ ಕೆ. ಮುತ್ತುಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. 

ಆರೆಸ್ಸೆಸ್‍ನ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಪ್ರಧಾನ ಭಾಷಣ ಮಾಡಿದರು. ಎನ್‍ಜಿಒ ಸಂಘ್ ಜಿಲ್ಲಾಧ್ಯಕ್ಷ ಕೆ. ರಂಜಿತ್, ಕೆಜಿಓಎಸ್ ಜಿಲ್ಲಾಧ್ಯಕ್ಷ ರಾಜೇಂದ್ರ ಕುಂಟಾರ್, ಬಿಎಂಎಸ್ ಜಿಲ್ಲಾಧ್ಯಕ್ಷ ಕೆ. ಉಪೇಂದ್ರ, ಎನ್‍ಟಿಯು ಜಿಲ್ಲಾಧ್ಯಕ್ಷ ಟಿ. ಕೃಷ್ಣನ್, ಕೆಎಸ್‍ಪಿಎಸ್ ರಾಜ್ಯ ಉಪಾಧ್ಯಕ್ಷ ಎಂ. ಈಶ್ವರರಾವ್, ಕೆ.ಎಸ್.ಪಿ.ಸಂಘ್ ಜಿಲ್ಲಾ ಕಾರ್ಯದರ್ಶಿ ಬಿ. ನಾಗರಾಜ, ಉದುಮ ಬ್ಲಾಕ್ ಅಧ್ಯಕ್ಷ ಒ. ಕೆ. ಕುಞÂರಾಮನ್   ಉಪಸ್ಥಿತರಿದ್ದರು. 

ನಂತರ ನಡೆದ ಸಂಘಟನಾ ಸಭೆಯಲ್ಲಿ ಪಿ. ದಿಲೀಪ್ ಕುಮಾರ್, ಕೆ. ಎನ್. ವಿನೋದ್, ಕೆ. ಕೇಶವ ಪ್ರಸಾದ್, ಪಿ. ಕೇಶವ ಭಟ್, ಎ. ವಿ. ನಾರಾಯಣನ್ ಮಾಸ್ಟರ್, ಆರ್. ಎಂ. ಶ್ರೀಧರ್ ರಾವ್ ನೇತೃತ್ವ ವಹಿಸಿದ್ದರು. ನಂತರ ನಡೆದ ವನಿತಾ ಸಮ್ಮೇಳನವನ್ನು ಕಾಸರಗೋಡು ನಗರಸಭಾ ಸದಸ್ಯೆ ಸವಿತಾ ಟೀಚರ್ ಉದ್ಘಾಟಿಸಿದರು. ಜಿಲ್ಲಾ ಉಪಾಧ್ಯಕ್ಷೆ ಲೀಲಾವತಿ ಅಧ್ಯಕ್ಷತೆ ವಹಿಸಿದ್ದರು. ಜಯಲಕ್ಷ್ಮಿ, ರೇವತಿ ಟೀಚರ್, ಪಿ. ಎಸ್. ವಾಣಿ ಉಪಸ್ಥಿತರಿದ್ದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ರಾಜ್ಯ ಉಪಾಧ್ಯಕ್ಷ ಈಶ್ವರ ರಾವ್ ಪ್ರಧಾನ ಭಾಷಣ ಮಾಡಿದರು

ಪಿಂಚಣಿ ಸುಧಾರಣಾ ಆಯುಕ್ತರನ್ನು ನೇಮಿಸಿ ತಕ್ಷಣ ಪಿಂಚಣಿ ಸುಧಾರಣಾ ಪ್ರಕ್ರಿಯೆಯನ್ನು ಆರಂಭಿಸಬೇಕು, ಕೇರಳ ರಾಜ್ಯ ಪಿಂಚಣಿದಾರರ ಸಂಘದ ಜಿಲ್ಲಾ ಸಮ್ಮೇಳನ ಸರ್ಕಾರವನ್ನು ಕೋರಿದೆ.ಮತ್ತು ತಡೆಹಿಡಿಯಲಾದ ಮಾಫಿ ಮೊತ್ತ ವಿತರಿಸಬೇಕು, 2023ರ ಫೆಬ್ರುವರಿ ನಂತರ ನಿವೃತ್ತ ನೌಕರರ ತಡೆಹಿಡಿಯಲಾದ ವೇತನ ಪರಿಷ್ಕರಣೆ ಬಾಕಿ ಪಾವತಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸುವಂತೆ ಠರಾವು ಮೂಲಕ ಒತ್ತಾಯಿಸಲಾಯಿತು.  ಸ್ವಾಗತ ಸಂಘದ ಕನ್ವೀನರ್ ಪಿ.ಕೆ ಕುಞಂಬು ಸ್ವಾಗತಿಸಿದರು. ಬ್ಲಾಕ್ ಕಾರ್ಯದರ್ಶಿ ಬಲರಾಮ ಭಟ್ ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries