ಮುಳ್ಳೇರಿಯ: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವ ಮತ್ತು ಮೂಡಪ್ಪ ಸೇವೆ ಮಾರ್ಚ್ 27 ರಿಂದ ಏಪ್ರಿಲ್ 7 ರವರೆಗೆ ನಡೆಯಲಿದ್ದು, ಯಶಸ್ಸಿಗಾಗಿ ನಾಡಿನ ವಿವಿಧ ಪ್ರದೇಶಗಳಲ್ಲಿ ಪ್ರಾದೇಶಿಕ ಸಮಿತಿ ರಚಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಮ್ಮಂಗೋಡು ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಇತ್ತೀಚೆಗೆ ಅಮ್ಮಂಗೋಡು ಗೋಳಿಯಡ್ಕ ಪ್ರಾದೇಶಿಕ ಸಮಿತಿ ರೂಪೀಕರಣ ಸಭೆ ಜರಗಿತು. ಸೀತಾರಾಮ ಬಳ್ಳುಳ್ಳಾಯ ಅಧ್ಯಕ್ಷತೆ ವಹಿಸಿ ದಿಕ್ಸೂಚಿ ಮಾತುಗಳನ್ನಾಡಿದರು. ರಾಜನ್ ಮುಳಿಯಾರು ಬ್ರಹ್ಮಕಲಶದ ಬಗ್ಗೆ ವಿವರಿಸಿದರು. ಗೋವಿಂದ ಬಳ್ಳಮೂಲೆ ಸಮಿತಿಯ ಕಾರ್ಯಯೋಜನೆಗಳ ಬಗ್ಗೆ ಸಮಗ್ರ ಮಾಹಿತಿಗಳನ್ನಿತ್ತರು.
ಸಭೆಯಲ್ಲಿ ಸಮಿತಿಯ ಕಾರ್ಯಕಾರೀ ಸಮಿತಿಯನ್ನು ರೂಪೀಕರಿಸಲಾಯಿತು. ರಾಘವೇಂದ್ರ ಉಡುಪುಮೂಲೆ (ಗೌರವಾಧ್ಯಕ್ಷರು), ಸದಾಶಿವ ಭಟ್ ಮುಂಡಪ್ಪಳ್ಳ (ಅಧ್ಯಕ್ಷರು), ಹರಿಶ್ಚoದ್ರ ಗೋಳಿಯಡ್ಕ, ಜಗದೀಶ ಅಮ್ಮಂಗೋಡು (ಉಪಾಧ್ಯಕ್ಷರು), ಪುರುಷೋತ್ತಮ ಗೋಳಿಯಡ್ಕ (ಪ್ರಧಾನ ಕಾರ್ಯದರ್ಶಿ), ಶಮಂತ್ ಗೋಳಿಯಡ್ಕ, ಪ್ರಿಯ ಗೋಳಿಯಡ್ಕ, ಅನುಷಾ ಗೋಳಿಯಡ್ಕ (ಜೊತೆ ಕಾರ್ಯದರ್ಶಿ), ಜ್ಯೋತಿ ಅಮ್ಮಂಗೋಡು ಕೋಶಾಧಿಕಾರಿ, ಮತ್ತು ಸದಸ್ಯರುಗಳನ್ನು ಸಮಿತಿಗೆ ಆಯ್ಕೆ ಮಾಡಲಾಯಿತು. ಮಹಿಳಾ ಸಮಿತಿಗೆ ಸಂಯೋಜಕರಾಗಿ ವಿಜಯಲಕ್ಷ್ಮಿ ಗೋಳಿಯಡ್ಕ ಅವರನ್ನು ಪುನರಾಯ್ಕೆ ಮಾಡಲಾಯಿತು. ಸಮಿತಿಯ ಪ್ರಧಾನ ಸಂಯೋಜಕರಾಗಿ ಪ್ರಕಾಶ ಅಮ್ಮಂಗೋಡು ಮತ್ತು ಸಹಸಂಯೋಜಕರಾಗಿ ರಾಜೇಂದ್ರ ಗೋಳಿಯಡ್ಕ ಇವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ನಿವೇದನಾ ಪತ್ರ ಮತ್ತು ರಶೀದಿ ಪುಸ್ತಕಗಳನ್ನು ಸಮಿತಿಯವರಿಗೆ ಹಸ್ತಾ0ತರಿಸಲಾಯಿತು. ಆಯ್ಕೆ ಮಾಡಲಾದ ಪದಾಧಿಕಾರಿಗಳು ಸ್ಥಾನ ಸ್ವೀಕರಿಸಿದ ಬಳಿಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಪ್ರಕಾಶ ಅಮ್ಮಂಗೋಡು ಸ್ವಾಗತಿಸಿ, ಪುರುಷೋತ್ತಮ ಗೋಳಿಯಡ್ಕ ವಂದಿಸಿದರು.

.jpg)
.jpg)
