ಬದಿಯಡ್ಕ: ಮಕರ ಸಂಕ್ರಾಂತಿಯ ಬಲಿವಾಡು ಕೂಟ ಮಂಗಳವಾರ ಕುಂಟಿಕಾನ ಮಠದಲ್ಲಿ ನಡೆಯಿತು.
ಬೆಳಗ್ಗೆ 10 ಕ್ಕೆ ರೋಹಿಣಿ ಎಡನಾಡು ಮತ್ತು ಸ್ಕಂದ ದಿವಾಣ ಇವರ ಮೃದಂಗ ವಾದನದೊಂದಿಗೆ ಭಕ್ತಿ ಸಂಗೀತ ನಡೆಯಿತು. ಬಳಿಕ 12 ರಿಂದ ನಡೆದ ಸಭಾ ಕಾರ್ಯಕ್ರಮದಲ್ಲಿ ಹಿರಿಯ ಸಾಧಕರಾದ ನಿತ್ಯಾನಂದ sಶೆಣೈ ಬದಿಯಡ್ಕ ಹಾಗೂ ಧಾರ್ಮಿಕ ಮುಂದಾಳು, ಉದ್ಯಮಿ, ತರಕಾರಿ ಕೃಷಿಯಲ್ಲಿ ವಿಶೇಷ ಸಾಧನೆ ಮಾಡಿದ ಬಾಲಸುಬ್ರಹ್ಮಣ್ಯ ಭಟ್ ಇವರನ್ನು ಗೌರವಿಸಲಾಯಿತು. ಡಾ.ನಾಗರಾಜ್ ಕಾಸರಗೋಡು ಅಧ್ಯಕ್ಷತೆ ವಹಿಸಿದ್ದರು. ಡಾ.ವೇಣುಗೋಪಾಲ ಕಳೆಯತ್ತೂಡಿ ಹಾಗು ಪೆರ್ವ ಸತ್ಯಶಂಕರ ಭಟ್ ಅಭಿನಂದನಾ ಭಾಷಣಗೈದರು. ಶ್ಯಾಮಪ್ರಸಾದ ಕುಳಮರ್ವ ವಂದಿಸಿದರು. ಬಳಿಕ ಶ್ರೀ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಪ್ರಸಾದ ಭೋಜನದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

.jpeg)
