ಮಂಜೇಶ್ವರ : ಉತ್ತರ ಮಲಬಾರಿನ ಅತಿಪುರಾತನ ಚರಿತ್ರ ಪ್ರಸಿದ್ಧ ಉದ್ಯಾವರ ಸಾವಿರ ಜಮಾಅತ್ ಅಸಯ್ಯಿದ್ ಶಹೀದ್ ವಲಿಯುಲ್ಲಾಹಿ ರ ಅ ಆಂಡ್ ನೇರ್ಚೆ ಗೆ ಇಂದು(ಜನವರಿ 17)ಶುಕ್ರವಾರ ಜುಮಾ ನಮಾಜಿನ ಬಳಿಕ ದ್ವಜಾರೋಹಣ ನಡೆಯಲಿದೆ. ಆಂಡ್ ನೇರ್ಚೆ ಪ್ರಯುಕ್ತ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮಗಳು ಜನವರಿ 18 ರಿಂದ 23ರ ತನಕ ವಿಜೃಂಭಣೆಯಿಂದ ಜರುಗಲಿರುವುದು ಎಂದು ಉದ್ಯಾವರ ಸಾವಿರ ಜಮಾತ್ ಕಿದ್ದು ಮತ್ತು ಇಸ್ಲಾಂ ಅಸೋಸಿಯೇಷನ್ ಸಮಿತಿ ಹಾಗೂ ಅಸ್ಸಯ್ಯದ್ ಶಹೀದ್ ವಲಿಯುಲ್ಲಾಹಿ ದರ್ಗಾ ಶರೀಫ್ ಸಮಿತಿ ಪದಾಧಿಕಾರಿಗಳು ಗುರುವಾರ ಸಂಜೆ ಕರೆದ ಸಂಯುಕ್ತ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ದರ್ಗಾ ಶರೀಫ್ ಝಿಯಾರತ್ ಕಾರ್ಯಕ್ರಮಕ್ಕೆ ಮಂಜೇಶ್ವರ ಸಂಯುಕ್ತ ಜಮಾಅತು ಅಧ್ಯಕ್ಷ ಸಯ್ಯದ್ ಅತಾವುಲ್ಲಾ ತಂಙಳ್ ಎಂಎ ನೇತೃತ್ವ ವಹಿಸಲಿದ್ದಾರೆ. ಅಸ್ಸಯ್ಯಿದ್ ಶಹೀದ್ ವಾಲಿಯುಲ್ಲಾಹಿ ದರ್ಗಾ ಶರೀಫ್ ಸಮಿತಿ ಅಧ್ಯಕ್ಷ ಸಯ್ಯಿದ್ ಪೂಕುಂಜಿ ತಂಗಳ್ ಧ್ವಜಾರೋಹಣ ನಿರ್ವಹಿಸುವರು
ಸಮಸ್ತ ಕೇರಳ ಜಮೀರ್ ತುಲ್ ಉಲಾಮ ಅಧ್ಯಕ್ಷರೂ ಉದ್ಯಾವರ ಸಾವಿರ ಜಮಾಅತ್ ಸಂಯುಕ್ತ ಖಾಝಿಯು ಆದ ಸಯ್ಯಿದುಲ್ ಉಲಮ ಅಸಯ್ಯದ್ ಮೊಹಮ್ಮದ್ ಜಿಫ್ರಿ ಮುತ್ತು ಕೊಯ ತಂಙಳ್ ಜನವರಿ 18 ರಾತ್ರಿ 8:30 ಕ್ಕೆ ನಡೆಯಲಿರುವ ಧಾರ್ಮಿಕ ಸಮ್ಮೇಳನ ಉದ್ಘಾಟಿಸುವರು ಉದ್ಘಾಟನಾ ಸಮ್ಮೇಳನದ ಅಧ್ಯಕ್ಷತೆಯನ್ನು ಸಾವಿರ ಜಮಾಅತ್ ಅಧ್ಯಕ್ಷ ಸಯ್ಯಿದ್ ಯುಕೆ ಸೈಫುಲ್ಲಾ ತಂಙಳ್ ಅಲ್ ಬುಖಾರಿ ವಹಿಸುವರು. ಉಸ್ತಾದ್ ಕೀಚೆರಿ ಅಬ್ದುಲ್ ಗಪ್ಪೂರು ಮೌಲವಿ ಮುಖ್ಯ ಪ್ರಭಾಷಣ ನಡೆಸುವರು. ನಂತರದ ರಾತ್ರಿಗಳಲ್ಲಿ ಜನವರಿ 19 ರಾತ್ರಿ ನೂರೇ ಅಜ್ಮೀರ್ ಆತ್ಮೀಯ ಸಂಗಮ ಕ್ಕೆ ಉಸ್ತಾದ್ ವಲಿಯುದ್ದೀನ್ ಫೈಝಿ ನೇತೃತ್ವ ನೀಡುವರು.
ಜನವರಿ 20 ರಾತ್ರಿ ಉಸ್ತಾದ್ ಮಸೂದು ಸಖಾಫಿ ಗೂಡಲ್ಲೂರು.ಜನವರಿ 21ರಾತ್ರಿಉಸ್ತಾದ್ ಉಸ್ಮಾನ್ ಜವ್ಹರಿ ನೆಲ್ಯಾಡಿ ಜನವರಿ 22ರಾತ್ರಿ ಉಸ್ತಾದ್ ಅನ್ವರ್ ಮುಹಯ್ದ್ದಿನ್ ಹುದವಿ. ಜನವರಿ 23ರಾತ್ರಿ ಉಸ್ತಾದ್ ನೌಫಲ್ ಸಖಾಫಿ ಕಳಸ ಪ್ರಭಾಷಣ ನಡೆಸಲಿದ್ದಾರೆ ಜನವರಿ 23 ಅಪರಾಹ್ನ 4:30 ಗಂಟೆಗೆ ನಡೆಯಲಿರುವ ಮೌಲಿದು ಪಾರಾಯಣದಲ್ಲಿ ಸೈಯದ್ ಜಲಾಲುದ್ದೀನ್ ಅಲ್ ಬುಖಾರಿ ಮಲ್ಹರ್ ಉದ್ಯಾವರ ಜಮಾಅತ್ ಮುದರಿಸ್ ಉಸ್ತಾದ್ ಬಿ ಎನ್ ಅಬ್ದುಲ್ ಖಾದರ್ ಮದನಿ, ಉದ್ಯಾವರ ಜಮಾಅತ್ ಖತೀಬ್ ಉಸ್ತಾದ್ ಅಬ್ದುಲ್ ಕರೀಂ ದಾರಿಮಿ ಉದ್ಯಾವರ ಜಮಾಅ ತ್ ಹಿಫ್ಲ್ ಕಾಲೇಜು ಉಸ್ತಾದ್ ಹಾಫಿಲ್ ಶಾನಿದ್ ಮರ್ಜಾನಿ ಮೊದಲಾದ ಸಾದಾತುಗಳು ಉಲಮಾಗಳು ನೇತೃತ್ವ ನೀಡುವರು. ಸಮಾರೋಪ ಸಮಾರಂಭವನ್ನು ಉಸ್ತಾದ್ ಪೇರೋಡ್ ಅಬ್ದುಲ್ ರೆಹ್ಮಾನ್ ಸಖಾಫಿ ಉದ್ಘಾಟಿಸಲಿದ್ದಾರೆ. ಸಮಾರೋಪ ದುಆ ನೇತೃತ್ವವನ್ನು ಸಯ್ಯಿದ್ ಅಬ್ದುಲ್ ರೆಹ್ಮಾನ್ ಮಸೂದ್ ಅಲ್ ಅಸ್ ಹರಿ ಅಲ್ ಬುಖಾರಿ ವಹಿಸುವರು. ಸಹಸ್ರಾರು ಮಂದಿಗೆ ಅನ್ನದಾನ ನಡೆಯುವುದರೊಂದಿಗೆ ಕಾರ್ಯಕ್ರಮ ಕೊನೆಗೊಳ್ಳಲಿರುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ಪದಾಧಿಕಾರಿಗಳು ತಿಳಿಸಿದರು
1000 ಜಮಾಅತ್ ಅಧ್ಯಕ್ಷ ಅಸ್ತಯ್ಯದ್ ಯುಕೆ ಸೈಫುಲ್ಲಾ ತಂಗಲ್, ಸಾವಿರ ಜಮಾ ಅತ್ತಿನ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಬಟಫ್ರ್ಲೈ, ದರ್ಗಾ ಶರೀಫ್ ಕಮಿಟಿ ಪ್ರಧಾನ ಕಾರ್ಯದರ್ಶಿ ಪಳ್ಳಿಕುಞ ಹಾಜಿ, ಜಮಾಅತ್ ಜಮಾಅತ್ ಮಾಜಿ ಅಧ್ಯಕ್ಷರುಗಳಾದ ಅಬ್ದುಲ್ ರಾಹ್ಮಾನ್ಹಾಜಿ ಹೊಸೂರ್ ಅಬ್ದುಲ್ ಖಾದರ್ ಫಾರೂಕ್ ಹಾಜಿ.ಜಮಾ ಅತ್ ಕೋಶಾಧಿಕಾರಿ ಅಹಮದ್ ಬಾವಾಹಾಜಿ ದರ್ಗಾ ಶರೀಫ್ ಕಮಿಟಿ ಕೋಶಾಧಿಕಾರಿ ಅಲಿಕುಟ್ಟಿ ನ್ಯಾಷನಲ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


