ಮುಳ್ಳೇರಿಯ: ಏಳು ದಶಕಗಳ ಕಾಲ ತೆಂಕುತಿಟ್ಟಿನ ಯಕ್ಷಗಾನ ರಂಗದಲ್ಲಿ ತನ್ನ ಅದ್ಭುತ ಬಣ್ಣದ ವೇಷಗಳಿಂದ ಮಿಂಚಿದ ಬಣ್ಣದ ಮಹಾಲಿಂಗ ಸಂಪಾಜೆಯವರ ಹೆಸರಿನಲ್ಲಿ ಸ್ಥಾಪಿಸಲ್ಪಟ್ಟ ಬಣ್ಣದ ಮಹಾಲಿಂಗ ಯಕ್ಷ ಪ್ರತಿμÁ್ಠನ ರಿ. ಪುತ್ತೂರು ಸಂಸ್ಥೆಯು ಇದೀಗ ಬಣ್ಣದಜ್ಜನ ಸ್ಮೃತಿ ಯಾನ- ಬಣ್ಣದ ಮಹಾಲಿಂಗರವರ ನೆನಪಿನಲ್ಲೊಂದು ಯಕ್ಷಪಯಣ ಎಂಬ ಸರಣಿ ಕಾರ್ಯಕ್ರಮವನ್ನು ಆಯೋಜಿಸಿದ್ದು ಜ. 19 ರಂದು ಅಪರಾಹ್ನ 2.30ಕ್ಕೆ ಬಣ್ಣದ ಮಹಾಲಿಂಗರ ಹುಟ್ಟೂರು ಕಾರಡ್ಕ ಸಮೀಪದ ಚೆನ್ನಂಗೋಡಿನ ಯಕ್ಷಗಾನ ಕಲಾವಿದ ದಿ. ಶಂಕರ ಪಾಟಾಳಿಯವರ ಮನೆಯಲ್ಲಿ ಕಾರ್ಯಕ್ರಮದ ಉದ್ಘಾಟನೆ ನೆರವೇರಲಿದೆ.
ತೆಂಕುತಿಟ್ಟು ಯಕ್ಷರಂಗದ ಮೇರು ಕಲಾವಿದ ಬಣ್ಣದ ಮಹಾಲಿಂಗರ ಸಾಧನೆಯನ್ನು ಮೆಲುಕುಹಾಕುವುದರೊಂದಿಗೆ ನವತಲೆಮಾರಿಗೆ ದಾಟಿಸುವ ಮಹತ್ತರವಾದ ಆಶಯವನ್ನಿರಿಸಿಕೊಂಡು ಪ್ರಾರಂಭವಾಗುವ ಈ ಕಾರ್ಯಕ್ರಮವನ್ನು ಸೀತಾ ಚೆನ್ನಂಗೋಡು ಉದ್ಘಾಟಿಸುವರು. ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಮಾಸ್ತರ್ ಪಂಜತ್ತೊಟ್ಟಿ ಅಧ್ಯಕ್ಷತೆ ವಹಿಸುವರು. ನಿವೃತ್ತ ಮುಖ್ಯೋಪಾಧ್ಯಾಯ ಮತ್ತು ಯಕ್ಷಗಾನ ಪೋಷಕ ಸುಧೀರ್ ಕುಮಾರ್ ರೈ ಮುಳ್ಳೇರಿಯ ಅವರು ಬಣ್ಣದ ಮಹಾಲಿಂಗರ ಸಂಸ್ಮರಣೆ ನಡೆಸುವರು. ಹಿರಿಯ ಯಕ್ಷಗಾನ ಕಲಾವಿದ, ಪ್ರಸಂಗಕರ್ತ ಎ.ಜಿ. ನಾಯರ್ ಅವರಿಗೆ ಬಣ್ಣದ ಮಹಾಲಿಂಗ ಯಕ್ಷಸ್ಮೃತಿ ಪುರಸ್ಕಾರ ಪ್ರದಾನ ನಡೆಯಲಿದೆ. ಹಿರಿಯ ಯಕ್ಷಗಾನ ಕಲಾವಿದ ಮತ್ತು ಗುರು ಜಯರಾಮ ಪಾಟಾಳಿ ಪಡುಮಲೆ ಅಭಿನಂದನ ಭಾಷಣ ಮಾಡಲಿರುವರು. ನಿವೃತ್ತ ಮುಖ್ಯೋಪಾಧ್ಯಾಯ ಬಾಲಕೃಷ್ಣ ಮಾಸ್ತರ್ ಪುಂಡಿಕಾಯಿ ಅವರು ಮುಖ್ಯ ಅತಿಥಿಗಳಾಗಿರುವ ಕಾರ್ಯಕ್ರಮದಲ್ಲಿ ಬಣ್ಣದ ಮಹಾಲಿಂಗ ಯಕ್ಷ ಪ್ರತಿμÁ್ಠನದ ಸಂಚಾಲಕ ತಿಮ್ಮಪ್ಪ ಪಟ್ಟೆ ಮತ್ತು ಬಣ್ಣದ ಮಹಾಲಿಂಗ ಸ್ಮೃತಿಯಾನದ ಸಂಚಾಲಕ, ನಿವೃತ್ತ ಯೋಧ ಸುಬ್ಬಪ್ಪ ಪಟ್ಟೆ ಅವರು ಶುಭಾಶಂಸನೆಗೈಯ್ಯುವರು. ಯಕ್ಷಗಾನ ಪೂರ್ವಸೂರಿಗಳ ಸ್ಮರಣೆಯ ಈ ಅತ್ಯಪೂರ್ವ ಕಾರ್ಯಕ್ರಮದಲ್ಲಿ ಎಲ್ಲಾ ಕಲಾಭಿಮಾನಿಗಳೂ ಭಾಗವಹಿಸಬೇಕೆಂದು ಪ್ರತಿμÁ್ಠನದ ಪ್ರಧಾನ ಕಾರ್ಯದರ್ಶಿ ನಾರಾಯಣ ದೇಲಂಪಾಡಿ ಮಾಧ್ಯಮ ಪ್ರಕಟಣೆಯ್ಲಲಿ ತಿಳಿಸಿದ್ದಾರೆ.

-bannada%20malinga.jpg)
.jpg)
