ಉಪ್ಪಳ: ಬಂದ್ಯೋಡು ಸನಿಹದ ಕಯ್ಯಾರ್ ಕ್ರಿಸ್ತ ರಾಜ ಇಗರ್ಜಿಯ ನೂತನ ಕಟ್ಟಡದ ಶಿಲಾನ್ಯಾಸ ಸಮಾರಂಭ ಜ. 18 ರಂದು ನಡೆಯಲಿದೆ. ಅಂದು ಬೆಳಿಗ್ಗೆ 7 ಗಂಟೆಗೆ ಕಾಸರಗೋಡು ವಲಯ ವಿಗಾರ್ ವಾರ್ ಫಾದರ್ ಸ್ಟ್ಯಾನಿ ಪಿರೇರಾ ಬಲಿಪೂಜೆ ನೆರವೇರಿಸುವರು. ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ್ಹ ನೆರವೇರಿಸುವರು. ವಾಸ್ತು ಶಿಲ್ಪಿ ಅನಿಲ್ ಲೋಬೊ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಕಯ್ಯಾರ್ ಚರ್ಚ್ ಧರ್ಮಗುರು ಫಾ. ವಿಶಾಲ್ ಮೋನಿಸ್, ಪಾಲನಾ ಸಮಿತಿ ಉಪಾಧ್ಯಕ್ಷ ರೋಶನ್ ಡಿ ಸೋಜ, ಕಾರ್ಯದರ್ಶಿ ಝೀನಾ ಡಿ ಸೋಜ ಮೊದಲಾದವರು ಉಪಸ್ಥಿತ ರಿರುವರು.

