HEALTH TIPS

ನನ್ನಲ್ಲೂ ಇದೆ ಭಾರತದ ಡಿಎನ್‌ಎ: ಇಂಡೋನೇಷ್ಯಾ ಅಧ್ಯಕ್ಷ ಸುಬಿಯಾಂತೊ

ನವದೆಹಲಿ: 'ಇಂಡೋನೇಷ್ಯಾಕ್ಕೆ ಭಾರತದ ನಾಗರಿಕತೆಯೊಂದಿಗೆ ನಂಟಿದೆ. ಹಲವು ಇಂಡೋನೇಷ್ಯಾದ ಹೆಸರುಗಳು ಸಂಸ್ಕೃತದ ಮೂಲವನ್ನು ಹೊಂದಿವೆ. ನನ್ನಲ್ಲೂ ಭಾರತೀಯ ಡಿಎನ್‌ಎ ಇದೆ' ಎಂದು ಇಂಡೋನೇಷ್ಯಾ ಅಧ್ಯಕ್ಷ ಪ್ರಬೊವೊ ಸುಬಿಯಾಂತೊ ಹೇಳಿದರು.

ಇಂದು ಸೋಮವಾರ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಯೋಜಿಸಿದ್ದ ಔತಣಕೂಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, 'ಇಂಡೋನೇಷ್ಯಾದ ಭಾಷೆಯ ಬಹುಮುಖ್ಯ ಭಾಗ ಬಂದಿರುವುದು ಸಂಸ್ಕೃತದಿಂದ.

ನಮ್ಮ ಹೆಸರು ಸೇರಿದಂತೆ ಹಲವು ಹೆಸರುಗಳ ಸಂಸ್ಕೃತದಲ್ಲಿಯೇ ಇದೆ. ನಮ್ಮ ದಿನನಿತ್ಯದ ದಿನಚರಿಯಲ್ಲಿಯೂ ಪುರಾತನ ಭಾರತದ ನಾಗರಿಕತೆಯ ಪ್ರಭಾವವಿದೆ. ಕೆಲವು ತಿಂಗಳುಗಳ ಹಿಂದೆ ಅನುವಂಶೀಯತೆ ಮತ್ತು ಡಿಎನ್‌ಎ ಪರೀಕ್ಷೆಗೆ ಒಳಗಾಗಿದ್ದೆ, ಆಗ ನನ್ನಲ್ಲಿ ಭಾರತೀಯ ಡಿಎನ್‌ಎ ಇರುವುದು ಗೊತ್ತಾಗಿದೆ' ಎಂದು ಹೇಳಿದರು.

'ಭಾರತಕ್ಕೆ ಕೆಲವೇ ದಿನಗಳಿಗಾಗಿ ಬಂದಿರಬಹುದು, ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನಾಯಕತ್ವ, ಬಡತನ ನಿರ್ಮೂಲನೆಗೆ ಅವರು ಕೈಗೊಂಡ ಕ್ರಮಗಳು ಮತ್ತು ಯೋಜನೆಗಳಿಂದ ಹಲವು ವಿಷಯಗಳನ್ನು ಕಲಿತಿದ್ದೇನೆ' ಎಂದರು.

'ಬಡತನದ ಅಂಚಿನಲ್ಲಿರುವವರಿಗೆ ಮತ್ತು ಸಮಾಜದಲ್ಲಿ ತಳಮಟ್ಟದಲ್ಲಿರುವವರಿಗೆ ಸಹಾಯ ಮಾಡುವ ಮೋದಿಯವರ ಬದ್ಧತೆ ನಮಗೆ ಸ್ಪೂರ್ತಿಯಾಗಿದೆ. ಉತ್ತಮ ಉದಾಹರಣೆಗಳನ್ನು ಯಾಕೆ ಅನುಸರಿಸಬಾರದು' ಎಂದರು.

ಸುಬಿಯಾಂತೊ ಅವರು ಭಾನುವಾರ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು.

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries