ತಿರುವನಂತಪುರಂ: ಕಾಂಗ್ರೆಸ್ ಸೇರಿದ ಬಿಜೆಪಿಯ ಮಾಜಿ ನಾಯಕ ಸಂದೀಪ್ ವಾರಿಯರ್ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಸ್ಥಾನ ನೀಡಲಾಗಿದೆ. ಮಾಧ್ಯಮ ಚರ್ಚೆಗಳಲ್ಲಿ ಭಾಗವಹಿಸುವ ಕೆ.ಪಿ..ಪಿ.ಸಿ.ಸಿ ವಕ್ತಾರರಾಗಿ ನೇಮಕ ಮಾಡಲಾಗಿದೆ.
ಸಂದೀಪ್ ವಾರಿಯರ್ ಅವರನ್ನು ವಕ್ತಾರರ ಪಟ್ಟಿಗೆ ಸೇರಿಸಲು ಕೆಪಿಸಿಸಿ ನಿರ್ಧರಿಸಿದೆ. ಈ ಬಗ್ಗೆ ಅಧ್ಯಕ್ಷ ಕೆ. ಸುಧಾಕರನ್ ಮಾಹಿತಿ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸಂದೀಪ್ ವಾರಿಯರ್ ಇನ್ನು ಕಾಂಗ್ರೆಸ್ ಪರವಾಗಿ ಚಾನೆಲ್ ಚರ್ಚೆಗಳಲ್ಲಿ ಭಾಗವಹಿಸಲಿದ್ದಾರೆ. ಕೆಪಿಸಿಸಿ ಮಾಧ್ಯಮ ವಿಭಾಗದ ಉಸ್ತುವಾರಿ ವಹಿಸಿರುವವರು ಅಡ್ವ ದೀಪ್ತಿ ಮೇರಿ ವರ್ಗೀಸ್ ಎಂಬವರಾಗಿದ್ದಾರೆ.
ಸಂದೀಪ್ ವಾರಿಯರ್ ಗೆ ಕೆಪಿಸಿಸಿ ಮಾಧ್ಯಮ ವಕ್ತಾರರಾಗಿ ಸ್ಥಾನಮಾನ ನೀಡಿದ ಕಾಂಗ್ರೆಸ್
0
ಜನವರಿ 27, 2025
Tags




