ಮಧೂರು: ಮಧೂರು ಗ್ರಾಮ ಪಂಚಾಯಿತಿಯಲ್ಲಿ ನೌಕರರ ಕೊರತೆ ನೀಗಿಸುವಂತೆ ಆಗ್ರಹಿಸಿ ಗ್ರಾಪಂ ಅಧ್ಯಕ್ಷ ಸೇರಿದಂತೆ ಜನಪ್ರತಿನಿಧಿಗಳು ಎಲ್.ಎಸ್.ಜಿ.ಡಿ.ವಿಭಾಗದ ಜಂಟಿ ನಿರ್ದೇಶಕರ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದರು.
ಇಪ್ಪತ್ತು ದಿವಸಗಳ ಹಿಂದೆಯಷ್ಟೆ ಪ್ರಭಾರಿಯಾಗಿ ನೇಮಕಗೊಂಡಿದ್ದ ಕಾರ್ಯದರ್ಶಿಯನ್ನು ಸ್ಥಳಾಂತರಗೊಳಿಸಿರುವುದಲ್ಲದೆ, ಪಂಚಾಯಿತಿಯ ಗುಮಾಸ್ತ ಯು.ಡಿ (3 ವ್ಯಕ್ತಿಗಳು) ಎಲ್.ಡಿ.ಗುಮಾಸ್ತ (3 ಜನ) ಹಾಗೂ ಲೆಕ್ಕಾಧಿಕಾರಿಗಳ ನೇಮಕ ಮಾಡದಿರುವುದನ್ನು ಖಂಡಿಸಿ ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳು ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದರು.
ಮಧೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಗೋಪಾಲಕೃಷ್ಣ ಧರಣಿ ನೇತೃತ್ವ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷರಾದ ಉಮೇಶ್ ಗಟ್ಟಿ, ಎಂ.ಯಶೋದಾ, ಬ್ಲಾಕ್ ಪಂಚಾಯಿತಿ ಸದಸ್ಯರಾದ ಸುಕುಮಾರ ಕುದುರೆಪಾಡಿ, ಜಮೀಲಾ ಅಹಮ್ಮದ್ ಹಾಗೂ ಗ್ರಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ಸೇರಿದಂತೆ ತೆರವಾಗಿರುವ ಸಿಬ್ಬಂದಿ ನೇಮಕಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಂಟಿ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು. ಪ್ರಸಕ್ತ ಹುದ್ದೆಯಲ್ಲಿರುವ ಕಾರ್ಯದರ್ಶಿಯನ್ನು ಮಾರ್ಚ್ ತಿಂಗಳ ವರೆಗೂ ಬದಲಾಯಿಸುವುದಿಲ್ಲೆ ಎಂಬ ಭರವಸೆಯನ್ನು ಪ್ರತಿಭಟನಾಕಾರರಿಗೆ ನೀಡಿದರು.





