ಕಾಸರಗೋಡು: ಸರ್ಕಾರದ ದೋಷಪೂರಿತ ನೀತಿಗಳಿಂದ ಸಂಕಷ್ಟ ಅನುಭವಿಸುತ್ತಿರುವ ಶಿಕ್ಷಕರು ಹಾಗೂ ನೌಕರರು ರಾಜ್ಯವ್ಯಾಪಕವಾಗಿ ಹಮ್ಮಿಕೊಂಡಿದ್ದ ಮುಷ್ಕರ ಜಿಲ್ಲೆಯಲ್ಲಿ ಸಂಪೂರ್ಣ ಯಶಸ್ವಿಯಾಗಿದೆ.
ಜಿಲ್ಲೆಯ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಹಾಜರಾತಿ ಗಣನೀಯವಾಗಿ ಕಡಿಮೆಯಾಗಿತ್ತು. ಮುಷ್ಕರದಲ್ಲಿ ಪಾಲ್ಗೊಳ್ಳದಂತೆ ಸರ್ಕಾರಿ ಬೆಂಬಲಿತ ಸಂಘಟನೆಗಳ ಬೆದರಿಕೆ ನಡುವೆಯೂ ಮುಷ್ಕರದಲ್ಲಿ ಪಾಲ್ಗೊಂಡ ನೌಕರರು ಮತ್ತು ಶಿಕ್ಷಕರನ್ನು ಸೆಟೋ ವತಿಯಿಂದ ಅಭಿನಂದಿಸಲಾಯಿತು.
ಅನಿರ್ದಿಷ್ಟಾವಧಿ ಮುಷ್ಕರ ಹಾಗೂ ನೌಕರರ ಪ್ರತಿಭಟನೆ ಪರಿಗಣಿಸಿ ತಡೆಹಿಡಿಯಲಾದ ಸವಲತ್ತುಗಳ ಬಿಡುಗಡೆಗೆ ಸರ್ಕಾರ ಸಿದ್ಧವಾಗಬೇಕು, ಮುಂದೆ ಮತ್ತೊಂದು ಮುಷ್ಕರಕ್ಕೆ ಅವಕಾಶ ನೀಡದೆ ಸವಲತ್ತು ವಿತರಣೆಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ಮುಷ್ಕರದ ಅಂಗವಾಗಿ ನೌಕರರು ಮತ್ತು ಶಿಕ್ಷಕರು ಸಿವಿಲ್ ಸ್ಟೇಷನ್ ಎದುರು ಧರಣಿ ನಡೆಸಿದರು. ಬಳಿಕ ನಡೆದ ಪ್ರತಿಭಟನಾ ಸಭೆಯನ್ನು ಎ.ಎಚ್.ಎಸ್.ಎಸ್.ಟಿ.ಎ. ಸಂಘಟನಾ ಕಾರ್ಯದರ್ಶಿ ಜಿ.ಜಿ.ಥಾಮಸ್ ಉದ್ಘಾಟಿಸಿದರು. 'ಸೆಟೊ' ಜಿಲ್ಲಾಧ್ಯಕ್ಷ ಕೆ.ಎಂ. ಜಯಪ್ರಕಾಶ ಅಧ್ಯಕ್ಷತೆ ವಹಿಸಿದ್ದರು. ಐಟಿ ಶಶಿ, ಕೆ. ಸಿ. ಸುಜಿತ್ ಕುಮಾರ್, ಎ.ಎಚ್. ಪ್ರವೀಣ್ ಕುಮಾರ್, ಕೆ. ಗೋಪಾಲಕೃಷ್ಣನ್, ಲೋಕೇಶ್ ಎಂಬಿ, ಆಚಾರ್, ವತ್ಸಲಾ ಕೃಷ್ಣನ್, ವಿ.ಎಂ. ರಾಜೇಶ್, ಜಯಪ್ರಕಾಶ್ ಆಚಾರ್ಯ, ಮಾಧವನ್ ನಂಬಿಯಾರ್, ಕುಞÂಕೃಷ್ಣನ್ ಪಿ, ವಿಜಯಕುಮಾರನ್ ನಾಯರ್, ಶ್ರೀನಿಮೋನ್, ವಿನೋದ್‍ರಾಜ್ ಎರ್ವಾಡ್, ಜಯರಾಜ್ ಪೆರಿಯ, ಕೆ.ಎ. ಜಾನ್, ಹರೀಶ್ ಪೆರಾ, ಎ. ರಾಧಾಕೃಷ್ಣನ್, ವಿಮಲ್ ಆದಿಯೋಡಿ, ರತಿ ವಿ, ಗಿರಿಜಾ ಎಂ, ಮಾತನಾಡಿದರು. ಸೆಟೊ ಜಿಲ್ಲಾ ಸಂಚಾಲಕ ಪಿ.ಟಿ. ಬೆನ್ನಿ ಸ್ವಾಗತಿಸಿದರು. ಕೋಶಾಧಿಕಾರಿ ಕೊಳತ್ತೂರು ನಾರಾಯಣ ವಂದಿಸಿದರು.




